ಚಿಲ್ಲರೆ ಹೂಡಿಕೆದಾರರ ಶೇರುಗಳ ಖರೀದಿಯ ನಿರಾಸಕ್ತಿಯಿಂದಾಗಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇರುಪೇಟೆ ಸೂಚ್ಯಂಕ 86 ಪಾಯಿಂಟ್‌ಗಳ ಇಳಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 81.73 ಪಾಯಿಂಟ್‌ಗಳ ಇಳಿಕೆ ಕಂಡ ಬಿಎಸ್‌ಇ-30ಸೂಚ್ಯಂಕ,ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 86.27 ಪಾಯಿಂಟ್‌ಗಳ ಇಳಿಕೆ ಕಂಡು 20,135.12 ಅಂಕಗಳಿಗೆ ತಲುಪಿದೆ.
ಉಕ್ಕು, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
ಅದರಂತೆ, ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 26.60 ಪಾಯಿಂಟ್‌ಗಳ ಇಳಿಕೆ ಕಂಡು 6,055.40 ಅಂಕಗಳಿಗೆ ತಲುಪಿದೆ.