ಶೇರುಪೇಟೆಯ ವಹಿವಾಟಿನ ಮುಕ್ತಾಯಕ್ಕೆ ಸೂಚ್ಯಂಕ ದಾಖಲೆಯ ಏರಿಕೆ ಕಂಡು 20,893.57 ಪಾಯಿಂಟ್‌ಗಳಿಗೆ ತಲುಪಿದ್ದು, ಸಮ್‌ವತ್ 2066 ವರ್ಷ ಉಲ್ಲಾಸದಾಯಕವಾಗಿ ಅಂತ್ಯಗೊಂಡಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ,ವಹಿವಾಟಿನ ಮುಕ್ತಾಯಕ್ಕೆ 121.30 ಪಾಯಿಂಟ್‌ಗಳ ಏರಿಕೆ ಕಂಡು, 6281.80 ಅಂಕಗಳಿಗೆ ತಲುಪಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಎಸ್‌ಇ-30 ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ 427.83 ಪಾಯಿಂಟ್‌ಗಳ ಏರಿಕೆ ಕಂಡು 20,893.57 ಅಂಕಗಳಿಗೆ ತಲುಪಿ ದಾಖಲೆಗಳನ್ನು ನಿರ್ಮಿಸಿದೆ. ಕಳೆದ 2008ರ ಜನೆವರಿ ತಿಂಗಳ ಅವಧಿಯಲ್ಲಿ ಗರಿಷ್ಠ 20,873.33 ಅಂಕಗಳಿಗೆ ತಲುಪಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಶೇರುದರಗಳಲ್ಲಿ 39.50 ರೂಪಾಯಿಗಳ ಏರಿಕೆಯಾಗಿ ಪ್ರತಿ ಶೇರು ದರ 1,104.75 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ಫೋಸಿಸ್ ಶೇರು ದರಗಳಲ್ಲಿ 52.50 ರೂಪಾಯಿಗಳ ಏರಿಕೆಯಾಗಿ 3,076.55 ರೂಪಾಯಿಗಳಿಗೆ ತಲುಪಿದೆ.ಎಸ್‌ಬಿಐ ಶೇರು ದರದಲ್ಲಿ 162.85 ರೂಪಾಯಿಗಳ ಏರಿಕೆಯಾಗಿ 3,434.90 ರೂಪಾಯಿಗಳಿಗೆ ಏರಿಕೆಯಾಗಿದೆ.
ತೈಲ ಮತ್ತು ಅನಿಲ ಕ್ಷೇತ್ರದ ಶೇರುಗಳ ವಹಿವಾಟಿನಲ್ಲಿ ಶೇ.2.77ರಷ್ಟು ಏರಿಕೆಯಾಗಿದ್ದು 11,147.90 ಅಂಕಗಳಿಗೆ ತಲುಪಿದೆ.ಉಕ್ಕು ಕ್ಷೇತ್ರದ ಶೇರು ವಹಿವಾಟಿನಲ್ಲಿ ಕೂಡಾ ಶೇ.2.27ರಷ್ಟು ಹೆಚ್ಚಳವಾಗಿ 17,467.93 ಅಂಕಗಳಿಗೆ ತಲುಪಿದೆ.
ವಾಹನೋದ್ಯಮ ಕ್ಷೇತ್ರಗಳ ಶೇರು ವಹಿವಾಟಿನಲ್ಲಿ ಶೇ.1.67ರಷ್ಟು ಏರಿಕೆಯಾಗಿ 10,241.05 ಅಂಕಗಳಿಗೆ ತಲುಪಿದೆ.ಟಾಟಾ ಮೋಟಾರ್ಸ್ ಶೇರು ದರಗಳಲ್ಲಿ 47.80 ರೂಪಾಯಿಗಳ ಏರಿಕೆಯಾಗಿ 1,233.10 ರೂಪಾಯಿಗಳಿಗೆ ತಲುಪಿದೆ.