ಸತತ ಮೂರು ದಿನಗಳ ಏರಿಕೆ ಕಂಡ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಲಾಭದಾಯಕ ವಹಿವಾಟಿನಿಂದಾಗಿ 152 ಪಾಯಿಂಟ್‌ಗಳ ಕುಸಿತ ಕಂಡು ಅಂತ್ಯಗೊಂಡಿದೆ.
ಆರಂಭಿಕ ಚೇತರಿಕೆ ಕಂಡಿದ್ದ ಬಿಎಸ್‌ಇ-30 ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ 152.58 ಪಾಯಿಂಟ್‌ಗಳ ಇಳಿಕೆ ಕಂಡು 20,852.38 ಅಂಕಗಳಿಗೆ ತಲುಪಿದೆ.
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ವಹಿವಾಟಿನ ಅಂತ್ಯಕ್ಕೆ 39.25 ಪಾಯಿಂಟ್‌ಗಳ ಏರಿಕೆ ಕಂಡು 6,273.20 ಅಂಕಗಳಿಗೆ ತಲುಪಿದೆ.
ಲಾಭದಾಯಕ ನಿರೀಕ್ಷೆಯ ಹಿನ್ನೆಲೆಯಲ್ಲಿ, ಶೇರುಪೇಟೆಯ ಹೂಡಿಕೆದಾರರು ಶೇರುಗಳ ಮಾರಾಟದಲ್ಲಿ ತೊಡಗಿದ್ದರಿಂದ, ಶೇರುಪೇಟೆ ವಹಿವಾಟಿನಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬಿಎಸ್‌ಇ-30 ಸೂಚ್ಯಂಕದ 31 ಕಂಪೆನಿಗಳಲ್ಲಿ 21 ಕಂಪೆನಿಗಳು ಋಣಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ. ಇತರ ಕಂಪೆನಿಗಳು ಧನಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ.