ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್:ಅಲ್ಪ ಚೇತರಿಕೆ ಕಂಡ ಶೇರುಪೇಟೆ ಸಬಚ್ಯಂಕ (Sensex | Choppy trade | IT stocks | FMCG | IT)
Bookmark and Share Feedback Print
 
ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 80 ಪಾಯಿಂಟ್‌ಗಳ ಏರಿಕೆ ಕಂಡು ಮುಕ್ತಾಯವಾಗಿದೆ.

ವಹಿವಾಟಿನ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶೇರುಗಳು ಚೇತರಿಕೆ ಕಂಡಿದ್ದವು. ಆದರೆ, ಎಸ್‌ಬಿಐ ತ್ರೈಮಾಸಿಕ ಫಲಿತಾಂಶ ಪ್ರಕಟಗೊಂಡ ನಂತರ, ನಿರಾಸೆಗೊಂಡ ಹೂಡಿಕೆದಾರರು ಹೂಡಿಕೆ ಹಿಂತೆಗೆಯುವಲ್ಲಿ ಆಸಕ್ತಿ ತೋರಿದರು ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ತೊಳಲಾಟದ ಏರಿಳಿಕೆಯ ಮದ್ಯೆಯು ಶೇರುಪೇಟೆ ಬಿಎಸ್‌ಇ-30 ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ 80.10 ಪಾಯಿಂಟ್‌ಗಳ ಏರಿಕೆ ಕಂಡು 20,932.48 ಅಂಕಗಳಿಗೆ ತಲುಪಿದೆ.

ಎಫ್‌ಎಂಸಿಜಿ, ಮಾಹಿತಿ ತಂತ್ರಜ್ಞಾನ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರಗಳ ಚೇತರಿಕೆಯಿಂದಾಗಿ, ಶೇರುಪೇಟೆ ಸೂಚ್ಯಂಕದಲ್ಲಿ ಚೇತರಿಕೆಗೆ ಕಾರಣವಾಯಿತು.

ಇನ್ಫೋಸಿಸ್ ಟೆಕ್ನಾಲಾಜೀಸ್, ಟಾಟಾ ಕನ್ಸಲ್‌ಟನ್ಸಿ, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಮೋಟಾರ್ಸ್ ಶೇರುಗಳ ವಹಿವಾಟಿನಲ್ಲಿ ಕುಸಿತವಾಗಿವೆ.

ಶೇರುಪೇಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ.0.85ರಷ್ಟು ಏರಿಕೆ ಕಂಡು 11,148.22ಕ್ಕೆ ತಲುಪಿದೆ .ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಕೂಡಾ ಶೇ 0.38ರಷ್ಟು ಏರಿಕೆ ಕಂಡು 8,704.98 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ