ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ದುರ್ಬಲ ವಹಿವಾಟು:ಶೇರುಪೇಟೆ ಸೂಚ್ಯಂಕದಲ್ಲಿ ಕುಸಿತ (Sensex | Weak global cues | Nifty | Booked profit)
Bookmark and Share Feedback Print
 
ಯರೋಪ್ ಮಾರುಕಟ್ಟೆಗಳ ದುರ್ಬಲ ವಹಿವಾಟು ಬ್ಲೂಚಿಪ್ ಕಂಪೆನಿಗಳ ಮಿಶ್ರ ಫಲಿತಾಂಶಗಳಿಂದಾಗಿ ಹೂಡಿಕೆದಾರರು ಶೇರುಪೇಟೆಯ ವಹಿವಾಟಿನಲ್ಲಿ ನಿರಾಸಕ್ತಿ ತೋರಿದ್ದರಿಂದ 286 ಪಾಯಿಂಟ್‌ಗಳ ಭಾರಿ ಕುಸಿತ ಕಂಡಿದೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ 61.67 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ-30 ಶೇರುಪೇಟೆ ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ 286.62 ಪಾಯಿಂಟ್‌ಗಳ ಕುಸಿತ ಕಂಡು 20,589.09 ಅಂಕಗಳಿಗೆ ತಲುಪಿದೆ.

ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ರಿಯಲ್ಟಿ, ರಿಫೈನರಿ ಮತ್ತು ಐಟಿ ಕ್ಷೇತ್ರದ ಶೇರುಗಳ ವಹಿವಾಟಿನಲ್ಲಿ ಕುಸಿತ ಕಂಡಿದ್ದರಿಂದ, 81.45 ಪಾಯಿಂಟ್‌ಗಳ ಇಳಿಕೆ ಕಂಡು 6,194.25 ಅಂಕಗಳಿಗೆ ತಲುಪಿದೆ.

ಬಿಎಸ್‌ಇ-30 ಸೂಚ್ಯಂಕದ 18 ಶೇರುಕಂಪೆನಿಗಳಲ್ಲಿ 12 ಕಂಪೆನಿಗಳು ಧನಾತ್ಮಕವಾಗಿ ಅಂತ್ಯಗೊಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಇನ್ಫೋಸಿಸ್ ಟೆಕ್ನಾಲಾಜೀಸ್, ರಿಯಲ್ಟಿ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ