ಕೈಗಾರಿಕೆ ವೃದ್ಧಿ ದರ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ಶೇರುಪೇಟೆ ಸೂಚ್ಯಂಕ ವಹಿವಾಟನ ಮುಕ್ತಾಯಕ್ಕೆ 432 ಪಾಯಿಂಟ್‌ಗಳ ಇಳಿಕೆ ಕಂಡಿದೆ.
ಕಳೆದ ಎರಡು ದಿನಗಳ ಅವಧಿಯ ವಹಿವಾಟಿನಲ್ಲಿ 343 ಪಾಯಿಂಟ್‌ಗಳ ಕಲೆದುಕೊಂಡಿದ್ದ ಬಿಎಸ್‌ಇ-30 ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 432.20 ಪಾಯಿಂಟ್‌ಗಳ ಕುಸಿತ ಕಂಡು 20,256.89 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ವಹಿವಾಟಿನ ಮುಕ್ತಾಯಕ್ಕೆ 122.60 ಪಾಯಿಂಟ್‌ಗಳ ಕುಸಿತ ಕಂಡು 6,071.65 ಅಂಕಗಳಿಗೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಟೆಕ್ನಾಲಾಜೀಸ್, ಡಿಎಲ್‌ಎಫ್ ಲಿಮಿಟೆಡ್,ರಿಯಲ್ಟಿ ಸೆಕ್ಟರ್, ಭಾರ್ತಿ ಏರ್‌ಟೆಲ್ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
ಶೇರುಪೇಟೆಯ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ವಹಿವಾಟಿನ ಮುಕ್ತಾಯಕ್ಕೆ 4.76 ಪಾಯಿಂಟ್‌ಗಳ ಕುಸಿತ ಕಂಡಿವೆ.