ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್, ನಿಫ್ಟಿ ಕುಸಿತದೊಂದಿಗೇ ಮಾರುಕಟ್ಟೆ ಆರಂಭ (Sensex | National Stock Exchange Index | Nifty | Bombay Stock Exchange | BSE | NSE)
Bookmark and Share Feedback Print
 
ಸತತ ನಾಲ್ಕನೇ ಅವಧಿಗೆ ಕುಸಿತದ ಅಭಿಯಾನವನ್ನು ಮುಂದುವರಿಸಿರುವ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್‌ನ ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್, ಸೋಮವಾರವೂ 50 ಅಂಶ ಕುಸಿತದೊಂದಿಗೆ ಆರಂಭವಾಯಿತು.

ಕಳೆದ ಮೂರು ಅವಧಿಗಳಲ್ಲಿ 775 ಅಂಶಗಳನ್ನು ಕಳೆದುಕೊಂಡಿದ್ದ 30 ಶೇರುಗಳ ಸೂಚ್ಯಂಕ ಸೆನ್ಸೆಕ್ಸ್, ಸೋಮವಾರ ಬೆಳಿಗ್ಗೆ ವಹಿವಾಟು ಆರಂಭಗೊಂಡ ತಕ್ಷಣ 50 ಅಂಶ ಕೆಳಕ್ಕಿಳಿದು 20,106.89ಕ್ಕೆ ತಲುಪಿತು.

ಅಂತೆಯೇ, ವಿಶಾಲ ವ್ಯಾಪ್ತಿಯ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕವಾದ ನಿಫ್ಟಿಯು ಕೂಡ ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾದ ತಕ್ಷಣ 20 ಅಂಶ ಕುಸಿತ ಕಂಡು 6,051.65ಕ್ಕೆ ತಲುಪಿತು.

ಶೇರುಗಳು ಉನ್ನತ ಬೆಲೆ ಹೊಂದಿರುವುದರಿಂದ ಚಿಲ್ಲರೆ ಹೂಡಿಕೆದಾರರು ಲಾಭಕ್ಕಾಗಿ ಅವುಗಳನ್ನು ಮಾರಾಟ ಮಾಡಲು ಮುಂದಾಗಿರುವುದು ಈ ಕುಸಿತಕ್ಕೆ ಕಾರಣವಾಗಿತ್ತು.

ಆದರೆ, ಆದರೆ ಕಳೆದ ವಾರದ ಟ್ರೆಂಡ್‌ಗೆ ವಿರುದ್ಧವಾಗಿ, ಟಾಟಾ ಸ್ಟೀಲ್ 1.90 ಶೇ. ಹೆಚ್ಚಿನ ಮಟ್ಟದಲ್ಲಿ ಅಂದರೆ ಶೇರಿಗೆ 617.80ರಲ್ಲಿ ಆರಂಭಗೊಂಡಿತು. ಇದಕ್ಕೆ ಪ್ರಧಾನ ಕಾರಣ ಕಂಪನಿಯು ಹಿಂದೆಂದಿಗಿಂತ ಹೆಚ್ಚಿನ ತ್ರೈಮಾಸಿಕ ಲಾಭ ದಾಖಲಿಸಿದ್ದು.

ಉಳಿದ ಏಷ್ಯನ್ ಮಾರುಕಟ್ಟೆಗಳ ಬಗ್ಗೆ ಗಮನ ಹರಿಸಿದರೆ, ಹಾಂಕಾಂಗ್‌ನ ಹಾಂಗ್ ಸೆಂಗ್ ಸೂಚ್ಯಂಕವು ಶೇ.0.52 ಹೆಚ್ಚಿನ ಮಟ್ಟದಲ್ಲಿ ಆರಂಭ ಪಡೆದು ಉತ್ತಮ ನಿರ್ವಹಣೆ ತೋರುತ್ತಿದೆ.

ಅದೇ ರೀತಿ, ಜಪಾನಿನ ನಿಕ್ಕೀ ಮಾರುಕಟ್ಟೆ ಸೂಚ್ಯಂಕವು ಶೇ.0.59 ಅಂಶ ಮೇಲಕ್ಕೇರಿದ್ದು ಪ್ರಗತಿ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ