ಸೋಮವಾರದ ಸ್ಟಾಕ್ ವಹಿವಾಟಿನಲ್ಲಿ ಬ್ಯಾಂಕಿಂಗ್ ಸೆಕ್ಟರ್ ಸೂಚ್ಯಂಕವು ಅತೀ ಹೆಚ್ಚು ಲಾಭ ಗಳಿಸಿತು. ಅದು ಶೇ.2.43ರಷ್ಟು ಮೇಲಕ್ಕೇರಿ 14,509.60ಕ್ಕೆ ತಲುಪಿತು. ಹೆಲ್ತ್ ಕೇರ್ ಸೂಚ್ಯಂಕವು ಶೇ.1.07 ಗಳಿಕೆ ದಾಖಲಿಸಿ 6655.70ಕ್ಕೆ ಏರುವ ಮೂಲಕ ಎರಡನೇ ಅತೀ ಹೆಚ್ಚು ಲಾಭ ಗಳಿಸಿದ ಸೂಚ್ಯಂಕವಾಯಿತು. ಮಾಹಿತಿ ತಂತ್ರಜ್ಞಾನ ಸೆಕ್ಟರ್ ಸೂಚ್ಯಂಕವೂ ಶೇ.0.86 ಗಳಿಕೆ ಕಂಡು ದಿನದಂತ್ಯಕ್ಕೆ 6098.94ರಲ್ಲಿ ಕೊನೆಗೊಂಡಿತು.