ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮಾರಾಟ ಭರಾಟೆ: ಕುಸಿತದೊಂದಿಗೆ ಸೆನ್ಸೆಕ್ಸ್ ಆರಂಭ
(Sensex | National Stock Exchange Index | Nifty | Bombay Stock Exchange | BSE | NSE)
ಹಿಂದಿನ ಅವಧಿಯಲ್ಲಿ ಏರಿಕೆಯಿಂದಾಗಿ ಸಂತಸ ತಂದಿದ್ದ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್, ಮಂಗಳವಾರ ವಹಿವಾಟು ಆರಂಭಿಸಿದಾಗ ಏಷ್ಯಾ ಮಾರುಕಟ್ಟೆಯಲ್ಲಿನ ಸಮ್ಮಿಶ್ರ ಟ್ರೆಂಡ್‌ನಿಂದಾಗಿ ಕುಸಿತ ಕಂಡಿದೆ. ಸುಮಾರು 64 ಅಂಶ ಕುಸಿತದೊಂದಿಗೆ ಮಾರುಕಟ್ಟೆ ತೆರೆದುಕೊಂಡಿದೆ.
30 ಶೇರುಗಳ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಮಾರುಕಟ್ಟೆ ಸೂಚ್ಯಂಕವಾಗಿರುವ ಸೆನ್ಸೆಕ್ಸ್ ಸೋಮವಾರ 152.80 ಅಂಶ ಗಳಿಕೆ ಕಂಡಿದ್ದು, ಮಂಗಳವಾರ ಮಾರುಕಟ್ಟೆ ಆರಂಭವಾದಾಗ 63.92 ಅಂಶ ಕುಸಿಯಿತು. ಶೇ.34ರಷ್ಟು ಇಳಿಕೆಯಿಂದಾಗಿ ಅದು 20,245.77ಕ್ಕೆ ತಲುಪಿದೆ.
ರಿಯಾಲ್ಟಿ, ಹೂಡಿಕೆ ಸರಕುಗಳು, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಶೇರುಗಳು ಕೂಡ ಇದರೊಂದಿಗೆ ಕುಸಿತದೊಂದಿಗೆಯೇ ಆರಂಭವಾಗಿದೆ.
ಅದೇ ರೀತಿ ವಿಶಾಲ ವ್ಯಾಪ್ತಿಯ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (ಎನ್ಎಸ್ಇ) ಮಾರುಕಟ್ಟೆ ಸೂಚ್ಯಂಕವಾಗಿರುವ ನಿಫ್ಟಿ ಕೂಡ ಮಂಗಳವಾರ ವಹಿವಾಟು ಆರಂಭವಾದಾಗ 21.35 ಅಂಶ ಕುಸಿತದೊಂದಿಗೆ, 0.35 ಶೇ. ಇಳಿಕೆಯೊಂದಿಗೆ 6199.25 ಅಂಶದೊಂದಿಗೆ ಪ್ರಾರಂಭಗೊಂಡಿತು.
ಹಿಂದಿನ ಅವಧಿಯಲ್ಲಿ ಕೊಂಚ ಏರಿಕೆ ಕಂಡಿದ್ದರಿಂದ ಶೇರುಗಳ ಮಾರಾಟದ ಭರಾಟೆ ಮತ್ತು ಚಿಲ್ಲರೆ ಮಾರಾಟಗಾರರ ಲಾಭ ಗಳಿಕೆಯ ಉದ್ದೇಶದ ಕ್ರಮಗಳಿಂದ, ಮಾರಾಟ ಹೆಚ್ಚಳವಾಗಿದೆ ಮತ್ತು ಏಷ್ಯನ್ ಮಾರುಕಟ್ಟೆಯ ಇತರ ಸೂಚ್ಯಂಕಗಳಲ್ಲಿಯೂ ಮಿಶ್ರ ಪ್ರತಿಕ್ರಿಯೆ ಇದ್ದಿರುವುದರಿಂದ ಮಾರಾಟ ಹೆಚ್ಚಾಗಿ ಈ ಕುಸಿತ ಸಂಭವಿಸಿದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು.
ಉಳಿದಂತೆ, ಏಷ್ಯಾದ ಮತ್ತೊಂದು ಮಾರುಕಟ್ಟೆಯಾದ ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಶೇ.39ರಷ್ಟು ಕುಸಿತದೊಂದಿಗೆ ಆರಂಭವಾಗಿದೆ.
ಅದೇ ರೀತಿಯಲ್ಲಿ, ಜಪಾನ್ ಮಾರುಕಟ್ಟೆ ಸಂವೇದಿ ಸೂಚ್ಯಂಕ ನಿಕ್ಕಿ ಇದ್ದ ಸ್ಥಿತಿಯಲ್ಲೇ ಯಾವುದೇ ಏರುಪೇರು ಕಾಣದೆ ಮಾರುಕಟ್ಟೆ ವಹಿವಾಟನ್ನು ಮಂಗಳವಾರ ಆರಂಭಿಸಿದೆ.