ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಲೋಹದ ಶೇರುಗಳು ಧರಾಶಾಯಿ (Metal)
Bookmark and Share Feedback Print
 
ಮುಂಬೈ: ಶೇರು ಮಾರುಕಟ್ಟೆಯ ಕುಸಿತದಿಂದಾಗಿ ಮಂಗಳವಾರ ಅತೀ ಹೆಚ್ಚು ಬಾಧೆಗೊಳಗಾದ ಶೇರುಗಳೆಂದರೆ ಲೋಹದ ಉದ್ಯಮದ ಶೇರುಗಳು. ಸೆನ್ಸೆಕ್ಸ್ ಪತನದಿಂದಾಗಿ ತಾಮ್ರ ಉತ್ಪಾದಕ ಸಂಸ್ಥೆ ಸ್ಟರ್ಲೈಟ್ ಅತೀ ಹೆಚ್ಚು ನಷ್ಟ ಅನುಭವಿಸಿದೆ. ಅದು ಶೇ.5.4 ಮೌಲ್ಯ ಕಳೆದುಕೊಂಡು 172.60ಗೆ ತಲುಪಿದೆ. ಅಲ್ಯೂಮೀನಿಯಂ ಉತ್ಪಾದಕ ಹಿಂಡಾಲ್ಕೋ ಕೂಡ ಶೇ.5.21ರಷ್ಟು ಕುಸಿತ ಕಂಡು 212.05ಕ್ಕೆ ಮತ್ತು ಉಕ್ಕು ಸಂಸ್ಥೆ ಜಿಂದಾಲ್ ಸ್ಟೀಲ್ ಶೇ.1.13 ಕುಸಿತ ಕಂಡು 672 ರೂ.ಗೆ ತಲುಪಿದೆ. ಟಾಟಾ ಸ್ಟೀಲ್ ಕೂಡ ಹಿಂದಿನ ಅವಧಿಯ ಲಾಭವನ್ನು ಕಳೆದುಕೊಂಡು, ಶೇ.1.91 ನಷ್ಟ ಅನುಭವಿಸಿ 605.35ಕ್ಕೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲೋಹ