ಸಿಂಗಾಪುರ: ಚೀನಾವು ಮತ್ತೊಮ್ಮೆ ಹಣಕಾಸು ನೀತಿಯನ್ನು ಬಿಗಿಗೊಳಿಸಬಹುದು ಮತ್ತು ಯೂರೋಪಿನಲ್ಲಿ ಸಾಲದ ಸಮಸ್ಯೆಗಳು ಹೆಚ್ಚುತ್ತಿವೆ ಎಂಬ ಹೂಡಿಕೆದಾರರ ಆತಂಕದ ನಡುವೆಯೇ ಏಷ್ಯನ್ ಮಾರುಕಟ್ಟೆಯಲ್ಲಿ ಬುಧವಾರ ತೈಲ ಮಾರುಕಟ್ಟೆಯು ಸಮ್ಮಿಶ್ರ ಫಲ ಕಂಡಿದೆ. ಡಿಸೆಂಬರ್ ವಿತರಣೆಗಾಗಿರುವ ನ್ಯೂಯಾರ್ಕ್‌ನ ಪ್ರಮುಖ ಗುತ್ತಿಗೆಯ ಲೈಟ್ ಸ್ವೀಟ್ ಕಚ್ಚಾತೈಲವು ಅಲ್ಪ ಏರಿಕೆ ಕಂಡು ಬ್ಯಾರೆಲ್ ಒಂದಕ್ಕೆ 82.37 ಡಾಲರಿಗೆ ತಲುಪಿತು.