ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಬೆಲೆ ಏರಿದ್ರೂ 3 ತಿಂಗಳಲ್ಲಿ 33,800 ಕೋಟಿ ಚಿನ್ನ ಸೇಲ್! (Gold Demand | Third Quarter | 2010 | India | Jewellery)
Bookmark and Share Feedback Print
 
PTI
ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದ್ದರೂ, ಭಾರತೀಯ ಚಿನ್ನ ಕೊಳ್ಳುವ ಆಸೆ ಕಡಿಮೆಯಾಗಿಲ್ಲ. ಅಂತೆಯೇ ಜಗತ್ತಿನ ಅತಿದೊಡ್ಡ ಚಿನ್ನ ಖರೀದಿ ದೇಶವಾಗಿರುವ ಭಾರತದಲ್ಲಿ ಚಿನ್ನಾಭರಣಗಳಿಗೆ ಬೇಡಿಕೆಯೂ ಕಡಿಮೆಯಾಗಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಅಂತ್ಯಗೊಂಡ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಶೇ.36ರಷ್ಟು ಏರಿಕೆ ಕಂಡು 184.5 ಟನ್ನುಗಳಿಗೆ ತಲುಪಿದೆ.

ವಿಶ್ವ ಸ್ವರ್ಣ ಮಂಡಳಿ ವರದಿಯ ಪ್ರಕಾರ, 2009ರಲ್ಲಿ ಇದೇ ಜುಲೈಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಭಾರತದಲ್ಲಿ ಮಾರಾಟವಾಗಿರುವ ಚಿನ್ನಾಭರಣಗಳ ಪ್ರಮಾಣ 135.2 ಟನ್ನುಗಳು.

ಶೇ.36ರಷ್ಟು ಬೇಡಿಕೆ ವೃದ್ಧಿಯಾಗಿರುವ ಮೂಲಕ ಭಾರತದಲ್ಲಿ ಚಿನ್ನಾಭರಣ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ತೃತೀಯ ತ್ರೈಮಾಸಿಕ ಪರಾಮರ್ಶನಾ ವರದಿಯಲ್ಲಿ ಮಂಡಳಿ ಹೇಳಿದೆ.

ರೂಪಾಯಿಯ ಮೌಲ್ಯದಲ್ಲಿ ಹೇಳುವುದಾದರೆ, ತೃತೀಯ ತ್ರೈಮಾಸಿಕಾವಧಿಯಲ್ಲಿ ಭಾರತದ ಬಂಗಾರದ ಬೇಡಿಕೆ ಏರಿಕೆಯಾಗಿದ್ದು ಬರೋಬ್ಬರಿ 33,800 ಕೋಟಿ ರೂಪಾಯಿ. ಇದು 2009ರ ಇದೇ ಅವಧಿಗಿಂತ ಶೇ.67 ಏರಿಕೆ.

2010ರ ಪೂರ್ಣ ವರ್ಷಕ್ಕೆ ಇಡೀ ಜಗತ್ತಿನಲ್ಲಿ ಬೇಕಾಗಿರುವ ಚಿನ್ನದ ಬೇಡಿಕೆಯು ಭಾರತದಲ್ಲಿನ ಬೇಡಿಕೆಯಿಂದಾಗಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ