ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಚೇತರಿಸಿಕೊಂಡ ಸೆನ್ಸೆಕ್ಸ್: ಮತ್ತೆ 20 ಸಾವಿರ ದಾಟಿದ ಸೂಚ್ಯಂಕ (Bombay Stock Exchange | BSE | Sensex | stock market | Nifty)
Bookmark and Share Feedback Print
 
ಕುಸಿತದಿಂದ ಚೇತರಿಸಿಕೊಂಡು 191 ಅಂಶ ಮೇಲಕ್ಕೇರಿದ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆಕ್ಸ್, ಗುರುವಾರ ವಹಿವಾಟು ಆರಂಭವಾದಾಗ 20 ಸಾವಿರದ ಗಡಿ ದಾಟಿ ಮಾರುಕಟ್ಟೆಯಲ್ಲಿ ನೆಮ್ಮದಿ ಮೂಡಿಸಿತು. ಲೋಹ, ಹೂಡಿಕೆ ಸರಕುಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ಸ್ಥಿರ ಏಷ್ಯನ್ ಮಾರುಕಟ್ಟೆಯಿಂದ ಪ್ರೇರಿತವಾಗಿ ಮೇಲಕ್ಕೇರಿದವು.

30 ಶೇರುಗಳ ಬಿಎಸ್ಇ ಸೂಚ್ಯಂಕವು ಮಂಗಳವಾರದ ಅವಧಿಯಲ್ಲಿ 445ರಷ್ಟು ಅಂಶ ಕುಸಿದು ಆತಂಕಕ್ಕೆ ಕಾರಣವಾಗಿದ್ದರೆ, ಗುರುವಾರ ಬೆಳಿಗ್ಗೆ 191.30 ಅಂಶ ಮೇಲಕ್ಕೇರಿ 20,056.44ಕ್ಕೆ ತಲುಪಿತು.

ಅದೇ ರೀತಿ, ವಿಸ್ತೃತವಾದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ ಕೂಡ 87.50 ಅಂಶ ಮೇಲಕ್ಕೆ ನೆಗೆದು 6,076.20ಕ್ಕೆ ತಲುಪಿತ್ತು.

ಈಕ್ವಿಟಿಗಳಿಗೆ ಹೆಚ್ಚಿದ ವಿದೇಶೀ ಹೂಡಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆಯಿಂದಾಗಿ ಭಾರತದ ಬ್ಲೂಚಿಪ್ ಕಂಪನಿಗಳ ಮಾರುಕಟ್ಟೆಯಲ್ಲಿಯೂ ಚೇತರಿಕೆ ಕಂಡುಬಂದಿದೆ ಎಂದು ಬ್ರೋಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ, ಹಾಂಗ್‌ಕಾಂಗ್‌ನ ರಾಷ್ಟ್ರೀಯ ಸೂಚ್ಯಂಕ ಹ್ಯಾಂಗ್ ಸೆಂಗ್ ಶೇ.1.06ರಷ್ಟು ಏರಿಕೆ ಕಂಡಿದೆ. ಅದೇ ರೀತಿ ಜಪಾನ್‌ನ ನಿಕ್ಕಿ ಮಾರುಕಟ್ಟೆ ಸೂಚ್ಯಂಕವೂ ಶೇ.0.61 ಅಂಶ ಮೇಲಕ್ಕೇರಿದೆ.

ಅಮೆರಿಕದಲ್ಲಿ, ಡೋ ಜೋನ್ಸ್ ಕೈಗಾರಿಕಾ ಸೂಚ್ಯಂಕವು ಬುಧವಾರ ಒಂದಿಷ್ಟು ಕುಸಿತದೊಂದಿಗೆ ಕೊನೆಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ