ಮಾರುಕಟ್ಟೆಯ ಏರುಪೇರಿನಿಂದ ಕೂಡಿದ ದಿನವಾದ ಗುರುವಾರ ಸೆನ್ಸೆಕ್ಸ್ ಸೂಚ್ಯಂಕವು 440ರಷ್ಟು ಕುಸಿತದಿಂದ ಚೇತರಿಸಿಕೊಂಡು ದಿನದಂತ್ಯಕ್ಕೆ 65 ಅಂಶ ಏರಿಕೆಯೊಂದಿಗೆ ಮುಕ್ತಾಯ ಕಂಡಿತು.
ದೇಶದ ಹಣದುಬ್ಬರದ ದರದಲ್ಲಿ ಅಲ್ಪ ಕುಸಿತ ಕಂಡುಬಂದಿದ್ದರಿಂದ ಮತ್ತು ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಸೆನ್ಸೆಕ್ಸ್ 65.50 ಅಂಶ ಮೇಲಕ್ಕೇರಿ 19,930.64ರಲ್ಲಿ ಕೊನೆಗೊಂಡಿತು. ಬೆಳಿಗ್ಗೆ ಸುಮಾರು 250 ಅಂಶ ಪತನವಾಗಿ, ಪುನಃ ಚೇತರಿಕೆ ಕಂಡಿತ್ತು ಈ ಸೂಚ್ಯಂಕ.
ಅದೇ ರೀತಿ, ವಿಶಾಲ ವ್ಯಾಪ್ತಿಯ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿಯು ಹಿಂದಿನ ವಹಿವಾಟಿಗಿಂತ 10.10 ಅಂಶ ಮೇಲಕ್ಕೇರಿ, 5998.80ರಲ್ಲಿ ಕೊನೆಗೊಂಡಿತು.