ನಿಫ್ಟಿ 32 ಅಂಶ ಕೆಳಕ್ಕೆ
ಮುಂಬೈ: ವಿಸ್ತೃತ ಆಧಾರದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿಯು ಕೂಡ 31.70 ಅಂಶಗಳಷ್ಟು ಕುಸಿತ ಕಂಡು, 5967.10ರಲ್ಲಿ ವಹಿವಾಟು ನಡೆಸುತ್ತಿತ್ತು. ಸ್ಥಿರಾಸ್ಥಿ, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಸ್ಟಾಕುಗಳು ಕುಸಿತದ ಮುಂದಾಳುತ್ವ ವಹಿಸುತ್ತಿದ್ದವು. ಈಗಿರುವ ಮಟ್ಟದಲ್ಲೇ ಚಿಲ್ಲರೆ ಮಾರಾಟಗಾರರು ಮತ್ತು ಶೇರುಗಳ ಮಾರಾಟದ ಭರಾಟೆಯಿಂದಾಗಿ ಈ ಕುಸಿತ ಕಂಡುಬಂದಿದೆ ಎಂದು ವಿಶ್ಲೇಷಿಸುತ್ತಾರೆ ಬ್ರೋಕರ್‌ಗಳು.