ವಾರದಲ್ಲಿ ಎರಡನೇ ಅತಿದೊಡ್ಡ ಕುಸಿತ ಕಂಡ ಸೆನ್ಸೆಕ್ಸ್, ಶುಕ್ರವಾರ 345 ಅಂಶಗಳನ್ನು ಕಳೆದುಕೊಂಡು, ಎರಡು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿತು. 2ಜಿ ಸ್ಪೆಕ್ಟ್ರಂ ವಿತರಣೆಯ ಬಿಕ್ಕಟ್ಟಿನ ಆತಂಕವು ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿದ್ದು, ಶೇರುಗಳ ಮಾರಾಟ ಹೆಚ್ಚಾಗಿದ್ದರಿಂದ ಈ ಕುಸಿತ ಸಂಭವಿಸಿತು.
ವಾರದ ಆರಂಭದಲ್ಲಿ 444 ಅಂಶಗಳನ್ನು ಕಳೆದುಕೊಂಡಿದ್ದ ಶುಕ್ರವಾರ 345.20 ಅಂಶಗಳನ್ನು ಕಳೆದುಕೊಂಡು 19,585.44 ಕ್ಕೆ ತಲುಪಿತು. ಸೆಪ್ಟೆಂಬರ್ 17ರಂದು ಕೂಡ ಸೂಚ್ಯಂಕವು ಇದೇ ಮಟ್ಟದಲ್ಲಿತ್ತು.
ಇದೇ ರೀತಿಯಲ್ಲಿ ವಿಸ್ತೃತ ಆಧಾರದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ ಕೂಡ 5900ಕ್ಕಿಂತಲೂ ಕೆಳಮಟ್ಟಕ್ಕೆ ಕುಸಿಯಿತು. ದಿನದಲ್ಲಿ 108.50 ಅಂಶಗಳನ್ನು ಕಳೆದುಕೊಂಡ ಅದು, ದಿನದಂತ್ಯಕ್ಕೆ 5890.30ಕ್ಕೆ ತಲುಪಿತು.