ಮುಂಬೈ: ಈ ವಾರದಲ್ಲಿ ಸೆನ್ಸೆಕ್ಸ್ ಸೂಚ್ಯಂಕಕ್ಕೆ ಶೇ.2.84 ನಷ್ಟವಾಗಿದ್ದು, 50 ಶೇರುಗಳ ಸಿಎನ್ಎಕ್ಸ್ ನಿಫ್ಟಿ ಸೂಚ್ಯಂಕವೂ 181.35 ಅಂಶ ಅಂದರೆ ಶೇ.2.99 ಕೆಳಕ್ಕಿಳಿದು 5890ರಲ್ಲಿ ಕೊನೆಗೊಂಡಿತು. ಏಷ್ಯಾದಲ್ಲಿ ಮಾರುಕಟ್ಟೆ ಕುಸಿತದ ನೇತೃತ್ವವನ್ನು ಚೀನಾ ವಹಿಸಿಕೊಂಡಿದ್ದಂತಿತ್ತು. ಅಲ್ಲಿನ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಚೈನೀಸ್ ಸರಕಾರವು ಬಡ್ಡಿದರಗಳನ್ನು ಏರಿಸಲಿದೆ ಎಂಬ ಆತಂಕವೇ ಇದಕ್ಕೆ ಪ್ರಮುಖ ಕಾರಣ.