ಭಾರತದ ಎರಡನೇ ಅತಿದೊಡ್ಡ ಲಿಸ್ಟೆಡ್ ಟೆಲಿಕಾಂ ಆಪರೇಟರ್ ರಿಲಯನ್ಸ್ ಕಮ್ಯುನಿಕೇಶನ್ಸ್ (ಆರ್‌ಕಾಮ್) ಶೇರುಗಳು ಕಳೆದ ವಾರದಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿತು. 2ಜಿ ಸ್ಪೆಕ್ಟ್ರಂ ವಿತರಣೆಯಲ್ಲಿ ಹಗರಣವಾಗಿದೆ ಎಂದು ಸರಕಾರಿ ಸಮಿತಿಯೊಂದು ವರದಿ ಸಲ್ಲಿಸಿದ ಬಳಿಕ ಶೇ.12.68ರಷ್ಟು ಮೌಲ್ಯ ಕುಸಿದು 148.4 ರೂಪಾಯಿಗೆ ತಲುಪಿತು. ಪ್ರಮುಖ ಸೂಚ್ಯಂಕಗಳಲ್ಲಿ ರಿಯಾಲ್ಟಿ ಸೂಚ್ಯಂಕವು ಶೇ.9.29 ಕುಸಿದರೆ, ಹೂಡಿಕೆ ಸರಕುಗಳ ಶೇರುಗಳು ಶೇ.7.40ರಷ್ಟು ಪತನವಾಗಿತ್ತು. ತೈಲ ಮತ್ತು ಅನಿಲ ಸೂಚ್ಯಂಕ ಶೇ.4.71, ವಿದ್ಯುತ್ ಸೂಚ್ಯಂಕ ಶೇ.4.4 ಮತ್ತು ಪಿಎಸ್‌ಯು ಸೂಚ್ಯಂಕಗಳು ಶೇ.3.75ರಷ್ಟು ಕುಸಿತ ಕಂಡಿವೆ, ರಿಲಯನ್ಸ್ ಇಂಡಸ್ಟ್ರೀಸ್, ರಿಲಯನ್ಸ್ ಇನ್ಫ್ರಾ, ಡಿಎಲ್ಎಫ್, ಜಿಂದಾಲ್ ಸ್ಟೀಲ್, ವಿಪ್ರೋ, ಬಿಎಚ್ಇಎಲ್, ಎಸಿಸಿ, ಹಿಂಡಾಲ್ಕೋ, ಟಾಟಾ ಪವರ್, ಜೈಪ್ರಕಾಶ್ ಆಸ್ಸೋ, ಐಸಿಐಸಿಐ ಬ್ಯಾಂಕ್ ಮತ್ತು ಟಿಸಿಎಸ್ ಶೇರುಗಳು ಕೂಡ ನಷ್ಟ ಅನುಭವಿಸಿದವು.