ಗಳಿಕೆ ದಾಖಲಿಸಿದ ಶೇರುಗಳು
ಕಳೆದ ವಾರ ಭರ್ಜರಿ ಗಳಿಕೆ ದಾಖಲಿಸಿದ್ದೆಂದರೆ ಮಾರಾಟದಲ್ಲಿ ಭಾರತದ ಅತೀದೊಡ್ಡ ಟೆಲಿಕಾಂ ಆಪರೇಟರ್ ಎಂಬ ಹೆಗ್ಗಳಿಕೆಯ ಭಾರತಿ ಏರ್‌ಟೆಲ್. ಅದರ ಶೇರುಗಳು ಶೇ.7.45ರಷ್ಟು ಗಳಿಕೆ ದಾಖಲಿಸಿ 328.85 ರೂಪಾಯಿಗೆ ತಲುಪಿದವು. 2ಜಿ ಸ್ಪೆಕ್ಟ್ರಂ ವಿತರಣೆಯಲ್ಲಿ ಅವ್ಯವಹಾರವಾದ ಬಳಿಕ ಸರಕಾರದ ಸಮಿತಿಯೊಂದು ವರದಿ ಸಲ್ಲಿಸಿದ ಬಳಿಕ ಗ್ರಾಹಕರು ಶೇರುಗಳ ಬದಲಾವಣೆ ಮಾಡಿಕೊಂಡಿದ್ದೇ ಇದಕ್ಕೆ ಕಾರಣ. ಅದೇ ರೀತಿ ಭಾರತದ ಅತಿದೊಡ್ಡ ಬೈಕ್ ತಯಾರಿಕಾ ಸಂಸ್ಥೆ ಹೀರೋ ಹೋಂಡಾ ಮೋಟರ್ಸ್ ಶೇ.7.11ರಷ್ಟು ಪ್ರಗತಿ ಕಂಡಿದ್ದರೆ, ಔಷಧಿ ಸಂಸ್ಥೆ ಸಿಪ್ಲಾದ ಶೇರುಗಳು ಶೇ.3.62 ಗಳಿಕೆ ದಾಖಲಿಸಿದವು.