ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮಾರುಕಟ್ಟೆಗೆ ಟೆಲಿಕಾಂ ಹಗರಣದ ಗಾಳಿ: ಕುಸಿದ ಶೇರುಗಳು (Sensex | Nifty | Asian Market | Stock Exchange | Mumbai)
Bookmark and Share Feedback Print
 
ಸಮ್ಮಿಶ್ರ ಫಲ ಕಂಡ ವಾರದಲ್ಲಿ ಮುಂಬೈ ಮಾರುಕಟ್ಟೆಯು ಲಾಭ ಮತ್ತು ನಷ್ಟದ ನಡುವೆ ಓಲಾಡುತ್ತಾ, ಸತತ ಎರಡನೇ ವಾರವೂ ನಷ್ಟವೇ ಹೆಚ್ಚಾಗಿ, ವಾರದಲ್ಲಿ ಒಟ್ಟು 571 ಅಂಶಗಳನ್ನು ಕಳೆದುಕೊಂಡು, 2 ತಿಂಗಳಷ್ಟು ಹಿಂದಿನ ಸ್ಥಿತಿಗೆ ಮರಳಿತು. ಟೆಲಿಕಾಂ ಹಗರಣ, ಮೈಕ್ರೋಫೈನಾನ್ಸ್ ಬಿಕ್ಕಟ್ಟು, ಐರ್ಲೆಂಡ್ ಸಾಲದ ಪ್ರಮಾಣ ಏರಿಕೆ ಮತ್ತು ಚೀನಾದ ದರ ಹೆಚ್ಚಳ- ಇವುಗಳೆಲ್ಲವೂ ಭಾರತೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದವು.

ಧನಾತ್ಮಕವಾಗಿಯೇ ವಾರವನ್ನು 20,167ರಲ್ಲಿ ಆರಂಭಿಸಿದ ಸೆನ್ಸೆಕ್ಸ್ ಸೂಚ್ಯಂಕವು ಸೋಮವಾರ ಒಂದು ಹಂತದಲ್ಲಿ 153ರಷ್ಟು ಮೇಲಕ್ಕೇರಿ 20,310ಕ್ಕೂ ತಲುಪಿತ್ತು. ಅಕ್ಟೋಬರ್ ತಿಂಗಳ ಹಣದುಬ್ಬರವು ಶೇ.8.6 ಎಂದು ವರದಿಯಾದಾಗ ಬ್ಯಾಂಕಿಂಗ್ ಶೇರುಗಳ ಪ್ರಗತಿಯಿಂದ ಉತ್ತೇಜನ ದೊರೆತಿದ್ದೇ ಇದಕ್ಕೆ ಕಾರಣ. ಮಂಗಳವಾರವೂ ಧನಾತ್ಮಕವಾಗಿಯೇ 20,371ರಲ್ಲಿ ಆರಂಭ ಕಂಡಿದ್ದರೂ, ಆ ದಿನನವೇ 20 ಸಾವಿರದ ಗಡಿಯ ಮೇಲೆ ಕುಳಿತುಕೊಳ್ಳಲು ಅಸಮರ್ಥವಾಯಿತು. ಚೀನಾದಲ್ಲಿ ದರ ಏರಿಕೆಯಿಂದಾಗಿ ಲೋಹದ ಶೇರುಗಳು ಗಳಿಕೆ ಕಳೆದುಕೊಂಡವು. ಪರಿಣಾಮವಾಗಿ ಆ ದಿನ 445 ಅಂಶ ಕುಸಿತವಾಗಿ 19,865ರಲ್ಲಿ ಅಂತ್ಯವಾಯಿತು.

ಬುಧವಾರ ಈದ್ ರಜಾದಿನದ ಬಳಿಕ ಈ ನಷ್ಟದ ಅಭಿಯಾನವು ಬ್ಯಾಂಕಿಂಗ್ ಮತ್ತು ಟೆಲಿಕಾಂ ಶೇರುಗಳ ಕುಸಿತದಿಂದಾಗಿ ಗುರುವಾರ ಮತ್ತು ಶುಕ್ರವಾರವೂ ಮುಂದುವರಿದು, ವಾರಾಂತ್ಯದಲ್ಲಿ 19,585ರಲ್ಲಿ ಕೊನೆಗೊಂಡಿತು. ಈ ವಾರದಲ್ಲಿ ಸೆನ್ಸೆಕ್ಸ್ ಸೂಚ್ಯಂಕಕ್ಕೆ ಶೇ.2.84 ನಷ್ಟವಾಗಿದ್ದು, 50 ಶೇರುಗಳ ಸಿಎನ್ಎಕ್ಸ್ ನಿಫ್ಟಿ ಸೂಚ್ಯಂಕವೂ 181.35 ಅಂಶ ಅಂದರೆ ಶೇ.2.99 ಕೆಳಕ್ಕಿಳಿದು 5890ರಲ್ಲಿ ಕೊನೆಗೊಂಡಿತು.

ಏಷ್ಯಾದಲ್ಲಿ ಮಾರುಕಟ್ಟೆ ಕುಸಿತದ ನೇತೃತ್ವವನ್ನು ಚೀನಾ ವಹಿಸಿಕೊಂಡಿದ್ದಂತಿತ್ತು. ಅಲ್ಲಿನ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಚೈನೀಸ್ ಸರಕಾರವು ಬಡ್ಡಿದರಗಳನ್ನು ಏರಿಸಲಿದೆ ಎಂಬ ಆತಂಕವೇ ಇದಕ್ಕೆ ಪ್ರಮುಖ ಕಾರಣ.

ವಾರದಲ್ಲಿ ನಷ್ಟ ಅನುಭವಿಸಿದ ಶೇರುಗಳ
ಭಾರತದ ಎರಡನೇ ಅತಿದೊಡ್ಡ ಲಿಸ್ಟೆಡ್ ಟೆಲಿಕಾಂ ಆಪರೇಟರ್ ರಿಲಯನ್ಸ್ ಕಮ್ಯುನಿಕೇಶನ್ಸ್ (ಆರ್‌ಕಾಮ್) ಶೇರುಗಳು ಕಳೆದ ವಾರದಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿತು. 2ಜಿ ಸ್ಪೆಕ್ಟ್ರಂ ವಿತರಣೆಯಲ್ಲಿ ಹಗರಣವಾಗಿದೆ ಎಂದು ಸರಕಾರಿ ಸಮಿತಿಯೊಂದು ವರದಿ ಸಲ್ಲಿಸಿದ ಬಳಿಕ ಶೇ.12.68ರಷ್ಟು ಮೌಲ್ಯ ಕುಸಿದು 148.4 ರೂಪಾಯಿಗೆ ತಲುಪಿತು. ಪ್ರಮುಖ ಸೂಚ್ಯಂಕಗಳಲ್ಲಿ ರಿಯಾಲ್ಟಿ ಸೂಚ್ಯಂಕವು ಶೇ.9.29 ಕುಸಿದರೆ, ಹೂಡಿಕೆ ಸರಕುಗಳ ಶೇರುಗಳು ಶೇ.7.40ರಷ್ಟು ಪತನವಾಗಿತ್ತು. ತೈಲ ಮತ್ತು ಅನಿಲ ಸೂಚ್ಯಂಕ ಶೇ.4.71, ವಿದ್ಯುತ್ ಸೂಚ್ಂಕ ಶೇ.4.4 ಮತ್ತು ಪಿಎಸ್‌ಯು ಸೂಚ್ಯಂಕಗಳು ಶೇ.3.75ರಷ್ಟು ಕುಸಿತ ಕಂಡಿವೆ,
ರಿಲಯನ್ಸ್ ಇಂಡಸ್ಟ್ರೀಸ್, ರಿಲಯನ್ಸ್ ಇನ್ಫ್ರಾ, ಡಿಎಲ್ಎಫ್, ಜಿಂದಾಲ್ ಸ್ಟೀಲ್, ವಿಪ್ರೋ, ಬಿಎಚ್ಇಎಲ್, ಎಸಿಸಿ, ಹಿಂಡಾಲ್ಕೋ, ಟಾಟಾ ಪವರ್, ಜೈಪ್ರಕಾಶ್ ಆಸ್ಸೋ, ಐಸಿಐಸಿಐ ಬ್ಯಾಂಕ್ ಮತ್ತು ಟಿಸಿಎಸ್ ಶೇರುಗಳು ಕೂಡ ನಷ್ಟ ಅನುಭವಿಸಿದವು.

ಗಳಿಕೆ ದಾಖಲಿಸಿದ ಶೇರುಗಳ
ಕಳೆದ ವಾರ ಭರ್ಜರಿ ಗಳಿಕೆ ದಾಖಲಿಸಿದ್ದೆಂದರೆ ಮಾರಾಟದಲ್ಲಿ ಭಾರತದ ಅತೀದೊಡ್ಡ ಟೆಲಿಕಾಂ ಆಪರೇಟರ್ ಎಂಬ ಹೆಗ್ಗಳಿಕೆಯ ಭಾರತಿ ಏರ್‌ಟೆಲ್. ಅದರ ಶೇರುಗಳು ಶೇ.7.45ರಷ್ಟು ಗಳಿಕೆ ದಾಖಲಿಸಿ 328.85 ರೂಪಾಯಿಗೆ ತಲುಪಿದವು. 2ಜಿ ಸ್ಪೆಕ್ಟ್ರಂ ವಿತರಣೆಯಲ್ಲಿ ಅವ್ಯವಹಾರವಾದ ಬಳಿಕ ಸರಕಾರದ ಸಮಿತಿಯೊಂದು ವರದಿ ಸಲ್ಲಿಸಿದ ಬಳಿಕ ಗ್ರಾಹಕರು ಶೇರುಗಳ ಬದಲಾವಣೆ ಮಾಡಿಕೊಂಡಿದ್ದೇ ಇದಕ್ಕೆ ಕಾರಣ. ಅದೇ ರೀತಿ ಭಾರತದ ಅತಿದೊಡ್ಡ ಬೈಕ್ ತಯಾರಿಕಾ ಸಂಸ್ಥೆ ಹೀರೋ ಹೋಂಡಾ ಮೋಟರ್ಸ್ ಶೇ.7.11ರಷ್ಟು ಪ್ರಗತಿ ಕಂಡಿದ್ದರೆ, ಔಷಧಿ ಸಂಸ್ಥೆ ಸಿಪ್ಲಾದ ಶೇರುಗಳು ಶೇ.3.62 ಗಳಿಕೆ ದಾಖಲಿಸಿದವು.

ಕಳೆದ ವಾರದಲ್ಲಿ ಬಿಎಸ್ಇ ಮತ್ತು ಎನ್ಎಸ್ಇ ಮಾರುಕಟ್ಟೆಯ ಒಟ್ಟಾರೆ ವಹಿವಾಟಿನಲ್ಲಿ ಅನುಕ್ರಮವಾಗಿ 19,924.35 ಕೋಟಿ ಮತ್ತು 68,982.64 ಕೋಟಿ ರೂಪಾಯಿ ಇಳಿಕೆಯಾಗಿದೆ. ಹಿಂದಿನ ವಾರ ಇದೇ ವಹಿವಾಟಿನ ಪ್ರಮಾಣ ಅನುಕ್ರಮವಾಗಿ 27,881.03 ಕೋಟಿ ಮತ್ತು 87,104.84 ಕೋಟಿ ರೂ. ಇತ್ತು.
ಸಂಬಂಧಿತ ಮಾಹಿತಿ ಹುಡುಕಿ