ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೈಗೆಟುಕದೆ ಮೇಲಕ್ಕೇರುತ್ತಲೇ ಇದೆ ಚಿನ್ನ, ಬೆಳ್ಳಿ (Gold | Silver | Market | India | Global Trend)
Bookmark and Share Feedback Print
 
ಹಬ್ಬಗಳ ಋತು ಚಿನ್ನದ ಬೆಲೆಯನ್ನು ಗಗನದೆತ್ತರಕ್ಕೇರಿಸಿದ್ದು, ರಾಷ್ಟ್ರೀಯ ರಾಜಧಾನಿಯಲ್ಲಿ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂಗೆ 10 ರೂಪಾಯಿ ಏರಿಕೆ ಕಂಡು 20,350 ರೂ.ಗೆ ತಲುಪಿತು. ಇದೇ ರೀತಿ, ಬೆಳ್ಳೆಯ ಬೆಲೆಯೂ ಕಿಲೋಗೆ 1070 ರೂ. ಏರಿಕೆ ಕಂಡು ದಾಖಲೆಯ 41,500 ರೂಪಾಯಿಗೆ ತಲುಪಿದೆ.

ಮದುವೆಯ ಸೀಸನ್ ಕೂಡ ಬಂದಿರುವುದರಿಂದ, ಖರೀದಿ ಪ್ರಕ್ರಿಯೆಗೆ ವೇಗ ದೊರೆತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ, ಬೆಳ್ಳಿಯ ಬೆಲೆ ಏರಿದೆ.

ದೇಶೀ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ವಿದೇಶೀ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಔನ್ಸ್‌ಗೆ 7.50ರಷ್ಟು ಏರಿಕೆಯಾಗಿ 1361 ಡಾಲರ್‌ಗೆ ತಲುಪಿದೆ. ಚಿನ್ನದ ಬೆಲೆಯು ಶೇ.1.6ರಷ್ಟು ಏರಿಕೆಯಾಗಿ ಔನ್ಸ್‌ಗೆ 27.39 ಡಾಲರ್‌ಗೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ