ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 372 ಪಾಯಿಂಟ್‌ಗಳ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಟೆಕ್ನಾಲಾಜೀಸ್ ಮತ್ತು ಇತರ ಆರ್ಥಿಕ ಸಂಸ್ಥೆಗಳ ಚೇತರಿಕೆಯ ವಹಿವಾಟಿನಿಂದಾಗಿ ಬಿಎಸ್‌ಇ-30 ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 372.15 ಪಾಯಿಂಟ್‌ಗಳ ಏರಿಕೆ ಕಂಡು 19,957.59 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ,ವಹಿವಾಟಿನ ಮುಕ್ತಾಯಕ್ಕೆ 119.70 ಪಾಯಿಂಟ್‌ಗಳ ಏರಿಕೆ ಕಂಡು 6,010 ಅಂಕಗಳಿಗೆ ತಲುಪಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್ ಸೇರಿದಂತೆ ಇತರ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳು ವಹಿವಾಟಿನ ಮುಕ್ತಾಯಕ್ಕೆ ಶೇ.2.64ರಷ್ಟು ಏರಿಕೆ ಕಂಡು 14,066.42 ಅಂಕಗಳಿಗೆ ಏರಿಕೆಯಾಗಿದೆ.
ಸ್ಮಾಲ್‌ಕ್ಯಾಪ್ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಶೇ.1.46ರಷ್ಟು ಏರಿಕೆ ಕಂಡಿದೆ. ಮಿಡ್‌ಕ್ಯಾಪ್ ಸೂಚ್ಯಂಕ ಶೇ.1.28ರಷ್ಟು ಏರಿಕೆ ಕಂಡಿತ್ತು.