ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆಯೊಂದಿಗೆ ಆರಂಭಗೊಂಡ ಶೇರು ಮಾರುಕಟ್ಟೆ (Mumbai | Bombay Stock Exchange | Sensex | Nifty | Market)
Bookmark and Share Feedback Print
 
ಎರಡು ದಿನಗಳ ಕುಸಿತದ ಅಭಿಯಾನವನ್ನು ನಿಲ್ಲಿಸಿರುವ ಮುಂಬೈ ಮಾರುಕಟ್ಟೆ ಶೇರು ಸೂಚ್ಯಂಕ ಸೆನ್ಸೆಕ್ಸ್, ಗುರುವಾರ ಬೆಳಿಗ್ಗೆ ವಹಿವಾಟು ಆರಂಭವಾದಾಗ 122 ಅಂಶ ಮೇಲಕ್ಕೇರಿ ಹೊಸ ಭರವಸೆ ಮೂಡಿಸಿತು.

ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯ ಏರುಪೇರು ದೇಶದ ಮಾರುಕಟ್ಟೆ ಮೇಲೂ ಪ್ರಭಾವ ಬೀರಿ ಬುಧವಾರ 498 ಅಂಶ ಕಳೆದುಕೊಂಡಿತ್ತು. ಗುರುವಾರ ವಹಿವಾಟು ಆರಂಭವಾಗಿ ಐದು ನಿಮಿಷದಲ್ಲಿ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 122.10 ಅಂಶ ಮೇಲಕ್ಕೇರಿ 19,581.95ಕ್ಕೆ ತಲುಪಿತು.

ಅದೇ ರೀತಿ, ವಿಸ್ತೃತ ಆಧಾರದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ, 30.70 ಅಂಶ ಮೇಲಕ್ಕೇರಿ, 5896.45ಕ್ಕೆ ತಲುಪಿ, ವಹಿವಾಟುದಾರರದಲ್ಲಿ ಆಶಾವಾದಕ್ಕೆ ಕಾರಣವಾಯಿತು.

ವಿದೇಶೀ ನಿಧಿಗಳ ಕೊಳ್ಳುವಿಕೆ ಮತ್ತು ಜಾಗತಿಕ ಮಾರುಕಟ್ಟೆಯ ಸ್ಥಿರತೆಯಿಂದಾಗಿ ಈ ಏರಿಕೆ ಸಾಧ್ಯವಾಯಿತು ಎಂದು ಬ್ರೋಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ, ಇತರ ಏಷ್ಯಾ ಮಾರುಕಟ್ಟೆಯಲ್ಲಿಯೂ ಉತ್ತಮ ಪ್ರಗತಿ ಕಂಡುಬಂತು. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇ.0.65ರಷ್ಟು ಮೇಲಕ್ಕೇರಿ ಆರಂಭ ಕಂಡರೆ, ಜಪಾನ್‌ನ ನಿಕ್ಕೀ ಸೂಚ್ಯಂಕವು ಶೇ.0.41 ಅಂಶ ಮೇಲಕ್ಕೇರಿತು.

ಅಮೆರಿಕ ಮಾರುಕಟ್ಟೆಯಲ್ಲಿ ಡ್ಯೂ ಜಾನ್ಸ್ ಕೈಗಾರಿಕಾ ಸೂಚ್ಯಂಕವು ಬುಧವಾರ ಮಾರುಕಟ್ಟೆ ಅಂತ್ಯಗೊಂಡಾಗ ಶೇ.1.37ರಷ್ಟು ಮೇಲಕ್ಕೇರಿ ಕೊನೆಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ