ಸಾರ್ವಜನಿಕ ಕ್ಷೇತ್ರದ ಕೆಲ ಬ್ಯಾಂಕ್‌ಗಳು ಗೃಹಸಾಲ-ಹಣಕಾಸು ಹಗರಣದಲ್ಲಿ ಭಾಗಿಯಾಗಿರುವ ಅಂಶಗಳು ಬಹಿರಂಗವಾಗುತ್ತಿದ್ದಂತೆ, ಶೇರುಪೇಟೆ ವಹಿವಾಟಿನಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಸೂಚ್ಯಂಕ ಪಾತಾಳಕ್ಕೆ ಕುಸಿದಿದೆ.
ರಿಯಲ್ಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರದ ವಹಿವಾಟು ಕುಸಿತದಿಂದಾಗಿ ಬಿಎಸ್‌ಇ-30 ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 286.66 ಪಾಯಿಂಟ್‌ಗಳ ಕುಸಿತ ಕಂಡು 19,031.50 ಅಂಕಗಳಿಗೆ ತಲುಪಿದೆ
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 89.25 ಪಾಯಿಂಟ್‌ಗಳ ಇಳಿಕೆ ಕಂಡು 5,710.50 ಅಂಕಗಳಿಗೆ ತಲುಪಿದೆ.
ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ನಡೆಸಿದ ಅವ್ಯವಹಾರಗಳ ಪ್ರಕರಣವನ್ನು ಸಿಬಿಐ ವಹಿಸಿಕೊಂಡ ಹಿನ್ನೆಲೆಯಲ್ಲಿ, ಶೇರುಪೇಟೆಯಲ್ಲಿ ಭಾರಿ ಒತ್ತಡದ ವಾತಾವರಣ ಉಂಟಾಗಿದೆ.