ಸತತ ನಾಲ್ಕನೇ ದಿನಕ್ಕೆ ಏರಿಕೆ ಕಂಡ ಶೇರುಪೇಟೆ ಸೂಚ್ಯಂಕ, ಜಾಗತಿಕ ಸ್ಥಿರ ವಹಿವಾಟು ಹಾಗೂ ಹಣದುಬ್ಬರ ಇಳಿಕೆಯಾಗುತ್ತಿರುವ ಹಿನ್ನೆಲೆಯಿಂದಾಗಿ ವಹಿವಾಟಿನ ಮುಕ್ತಾಯಕ್ಕೆ 143 ಪಾಯಿಂಟ್ ಏರಿಕೆ ಕಂಡಿದೆ.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ 713.39 ಪಾಯಿಂಟ್‌ಗಳ ಚೇತರಿಕೆ ಕಂಡ ಮುಂಬೈ ಶೇರುಪೇಟೆಯ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 142.70 ಪಾಯಿಂಟ್‌ಗಳ ಏರಿಕೆ ಕಂಡು 19,992.70 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ವಹಿವಾಟಿನ ಮುಕ್ತಾಯಕ್ಕೆ 50.80 ಪಾಯಿಂಟ್‌ಗಳ ಏರಿಕೆ ಕಂಡು 6,011.70 ಅಂಕಗಳಿಗೆ ತಲುಪಿದೆ.
ಆಹಾರ ಹಣದುಬ್ಬರ ದರ ಪ್ರಸಕ್ತ ವಾರಂತ್ಯಕ್ಕೆ ಶೇ.9.60ಕ್ಕೆ ಇಳಿಕೆ, ರಫ್ತು ವಹಿವಾಟು ಹೆಚ್ಚಳ ಹಾಗೂ ಜಿಡಿಪಿ ದರ ಏರಿಕೆಯಿಂದಾಗಿ ಶೇರುಪೇಟೆ ಚೇತರಿಕೆಯ ಹಂತವನ್ನು ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.