ಜಾಗತಿಕ ದುರ್ಬಲ ವಹಿವಾಟಿನಿಂದಾಗಿ ಹೂಡಿಕೆದಾರರು ಲಾಭದಾಯಕ ವಹಿವಾಟಿನಲ್ಲಿ ನಿರತವಾಗಿದ್ದರಿಂದ, ಶೇರುಪೇಟೆ ಸೂಚ್ಯಂಕ 20,000 ಗಡಿಯನ್ನು ದಾಟುವಲ್ಲಿ ವಿಫಲವಾಗಿದೆ.
20,217.86 ಅಂಕಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ,ಬ್ಯಾಂಕಿಂಗ್ ಮತ್ತು ರಿಯಲ್ಟಿ ಕ್ಷೇತ್ರಗಳಲ್ಲಿ ಶೇರು ಖರೀದಿ ವಹಿವಾಟು ಕುಸಿತ ಕಂಡಿದ್ದರಿಂದ, ಸೂಚ್ಯಂಕ 14.38 ಪಾಯಿಂಟ್‌ಗಳ ಚೇತರಿಕೆ ಕಂಡು 19,981.31 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ಶೇ.0.55ರಷ್ಟು ಏರಿಕೆ ಕಂಡು 5,992.25 ಅಂಕಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಪಿಎಸ್‌ಯು, ಎಫ್‌ಎಂಸಿಜಿ, ರಿಯಲ್ಟಿ, ಗೃಹೋಪಕರಣ ಮತ್ತು ಹೆಲ್ತ್ ಕೇರ್ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
ಉಕ್ಕು , ತೈಲ ಮತ್ತು ಅನಿಲ, ಮಾಹಿತಿ ತಂತ್ರಜ್ಞಾನ, ಅಟೋ, ತಂತ್ರಜ್ಞಾನ ಮತ್ತು ಬಂಡವಾಳ ಯಂತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.