ಆಹಾರ ಹಣದುಬ್ಬರ ದರ ಏರಿಕೆಯಿಂದಾಗಿ ಬ್ಯಾಂಕ್ ಬಡ್ಡಿ ದರಗಳಲ್ಲಿ ಏರಿಕೆ ಯಾಗುವ ಸಂಕೇತಗಳ ಹಿನ್ನೆಲೆಯಲ್ಲಿ, ಬಾಂಕ್ ಮತ್ತು ರಿಯಲ್ಟಿ ಕ್ಷೇತ್ರದ ಶೇರುಗಳ ಮಾರಾಟದಿಂದಾಗಿ, ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 454ಪಾಯಿಂಟ್‌ಗಳ ಭಾರಿ ಕುಸಿತ ಕಂಡಿದೆ.
ಕಳೆದ ದಿನಗಳ ವಹಿವಾಟಿನಲ್ಲಿ 285 ಪಾಯಿಂಟ್‌ಗಳನ್ನು ಕಳೆದುಕೊಂಡ ಬಿಎಸ್‌ಇ-ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 454.12 ಪಾಯಿಂಟ್‌ಗಳ ಇಳಿಕೆ ಕಂಡು 19,242.36 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 137.20 ಪಾಯಿಂಟ್‌ಗಳ ಕುಸಿತ ಕಂಡು 5,766.50 ಅಂಕಗಳಿಗೆ ತಲುಪಿದೆ.
2ಜ್ ತರಂಗಾಂತರ ಹಂಚಿಕೆ ಹಾಗೂ ನವೆಂಬರ್ 27ಕ್ಕೆ ವಾರಂತ್ಯಗೊಂಡಂತೆ, ಆಹಾರ ಹಣದುಬ್ಬರ ದರ ಶೇ.8.60ದಿಂದ ಶೇ.8.69ರಷ್ಟು ಏರಿಕೆ ಕಂಡ ಹಿನ್ನೆಲೆಯಲ್ಲಿ, ಮಾರುಕಟ್ಟೆಗಳ ಪ್ರಮುಖ ವಹಿವಾಟುದಾರರು ಆತಂಕವನ್ನು ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಲಯನ್ಸ್ ಕಮ್ಯೂನಿಕೇಶನ್ಸ್ ಲಿಮಿಟೆಡ್, ಭಾರ್ತಿ ಏರ್‌ಟೆಲ್ ಸೇರಿದಂತೆ ಪ್ರಮುಖ ಟೆಲಿಕಾಂ ಕಂಪೆನಿಗಳು ಇಂದಿನ ವಹಿವಾಟಿನ ಮುಕ್ತಾಯಕ್ಕೆ ಭಾರಿ ಕುಸಿತ ಕಂಡಿವೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇನ್ಫೋಸಿಸ್, ವಿಪ್ರೋ ಮತ್ತು ಎಂಫಾಸಿಸ್ ಕಂಪೆನಿಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮೂಲಗಳು ತಿಳಿಸಿವೆ.