ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್:ಸತತ ಮೂರನೇ ದಿನವೂ ಚೇತರಿಕೆ ಕಂಡ ಸೂಚ್ಯಂಕ (Stock market | Sensex | Nifty)
Bookmark and Share Feedback Print
 
ಶೇರುಪೇಟೆಯ ವಹಿವಾಟು ಸತತ ಮೂರನೇ ದಿನವೂ ಏರಿಕೆ ಕಂಡಿದ್ದು, ಹಣದುಬ್ಬರ ಇಳಿಕೆಯಿಂದ ಆರ್‌ಬಿಐ ರೆಪೋ ದರಗಳಲ್ಲಿ ಹೆಚ್ಚಳ ಘೋಷಿಸುವುದಿಲ್ಲ ಎನ್ನುವ ಆಶಾಭಾವನೆಯಿಂದಾಗಿ, ಹೂಡಿಕೆದಾರರು ಶೇರುಗಳ ಖರೀದಿಯಲ್ಲಿ ತೊಡಗಿದ್ದರಿಂದ, ಸೂಚ್ಯಂಕ 107 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಕಳೆದ ಎರಡು ದಿನಗಳ ವಹಿವಾಟಿನಲ್ಲಿ 450 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ-30 ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 107.41 ಪಾಯಿಂಟ್‌ಗಳ ಏರಿಕೆ ಕಂಡು 19,799.19 ಅಂಕಗಳಿಗೆ ತಲುಪಿದೆ.

ಹಣದುಬ್ಬರ ದರ ಇಳಿಕೆಯಾಗಿದ್ದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಹೆಚ್ಚಳಗೊಳಿಸುವುದಿಲ್ಲ ಎನ್ನುವ ವಿಶ್ವಾಸದಿಂದಾಗಿ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳ ವಹಿವಾಟಿನಲ್ಲಿ ಚೇತರಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಗೃಹೋಪಕರಣ ವಸ್ತುಗಳು, ಉಕ್ಕು ಮತ್ತು ಬಂಡವಾಳ ಯಂತ್ರಗಳು ಕ್ಷೇತ್ರದ ಶೇರುಗಳ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 36.45 ಪಾಯಿಂಟ್‌‌ಗಳ ಏರಿಕೆ ಕಂಡು 5,944.10 ಅಂಕಗಳಿಗೆ ತಲುಪಿದೆ

ಬಿಎಸ್‌ಇ ಮಾರುಕಟ್ಟೆಯ ರಿಲಯನ್ಸ್ ಇಂಡಸ್ಟ್ರೀಸ್, ರಿಲಯನ್ಸ್ ಇನ್‌ಫ್ರಾ, ಲಾರ್ಸನ್ ಆಂಡ್ ಟೌಬ್ರೋ, ಎಸ್‌ಬಿಐ, ಟಾಟಾ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ 19 ಕ್ಷೇತ್ರದ ಶೇರುಗಳು ಲಾಭದಾಯಕ ವಹಿವಾಟು ನಡೆಸಿದ್ದು, 11ಕ್ಷೇತ್ರದ ಶೇರುಗಳು ನಷ್ಟವನ್ನು ಅನುಭವಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ