ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 20,000 ಅಂಕಗಳಿಗೆ ಸ್ಥಿರವಾದ ಶೇರುಪೇಟೆ ಸೂಚ್ಯಂಕ (BSE benchmark | Sensex | Foreign funds | Investors)
Bookmark and Share Feedback Print
 
ವರ್ಷಾಂತ್ಯದ ಹಿನ್ನೆಲೆಯಲ್ಲಿ ಹೂಡಿಕೆದಾರರು, ವಿದೇಶಿ ಬಂಡವಾಳ ಕಂಪೆನಿಗಳು ಶೇರುಪೇಟೆಯಲ್ಲಿ ಶೇರು ಖರೀದಿಗೆ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ, ಅಲ್ಪ ಕುಸಿತದೊಂದಿಗೆ ವಹಿವಾಟು ಅಂತ್ಯಗೊಂಡಿದೆ.

ವಾಹನೋದ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರ ಕುಸಿತ ಕಂಡಿದ್ದರಿಂದ ಬಿಎಸ್‌ಇ-30 ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.3.51ರಷ್ಟು ಕುಸಿತ ಕಂಡು 20,035.42 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.2.10 ಪಾಯಿಂಟ್‌ಗಳ ಕುಸಿತ ಕಂಡು 5,996 ಅಂಕಗಳಿಗೆ ತಲುಪಿದೆ.

ಎಸ್‌ಬಿಐ, ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್, ಲಾರ್ಸನ್ ಆಂಡ್ ಟೌಬ್ರೋ, ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು ವಹಿವಾಟಿನ ಅಂತ್ಯಕ್ಕೆ ಕುಸಿತ ಕಂಡಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಪವರ್, ವಿಪ್ರೋ, ಇನ್ಫೋಸಿಸ್, ಟಾಟಾ ಕನ್ಸಲ್‌ಟನ್ಸಿ ಮತ್ತು ಬಜಾಜ್ ಅಟೋ ಕಂಪೆನಿಗಳು ವಹಿವಾಟಿನಲ್ಲಿ ಅಲ್ಪ ಚೇತರಿಕೆ ಕಂಡಿವೆ.

ತೈಲ ಮತ್ತು ಅನಿಲ ಕ್ಷೇತ್ರಗಳು, ವಾಹನೋದ್ಯಮ ಕ್ಷೇತ್ರ, ಬಂಡವಾಳ ವಸ್ತುಗಳ ಕ್ಷೇತ್ರಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.ಹೆಲ್ತ್‌ಕೇರ್ ಸೂಚ್ಯಂಕ ತಂತ್ರಜ್ಞಾನ ಸೂಚ್ಯಂಕ, ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ವಹಿವಾಟಿನ ಮುಕ್ತಾಯಕ್ಕೆ ಚೇತರಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ