ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್: ಆರು ವಾರಗಳ ಗರಿಷ್ಠ ಏರಿಕೆ ಕಂಡ ಸೂಚ್ಯಂಕ (Sensex | Asian cues | Heavy buying | Derivatives | Investors demand)
ಏಷ್ಯಾ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಶೇರುಪೇಟೆಯ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಆರು ವಾರಗಳ ಗರಿಷ್ಠ ಏರಿಕೆ ಕಂಡಿದೆ.
ಎಫ್‌ಎಂಸಿಜಿ, ಗೃಹೋಪಕರಣ ವಸ್ತುಗಳು, ಉಕ್ಕು ಕ್ಷೇತ್ರದ ಶೇರುಗಳ ಖರೀದಿ ವಹಿವಾಟಿನಲ್ಲಿ ಹೆಚ್ಚಳವಾಗಿದ್ದರಿಂದ ಬಿಎಸ್‌ಇ-30ಸೂಚ್ಯಂಕ, 230.61 ಪಾಯಿಂಟ್‌ಗಳ ಏರಿಕೆ ಕಂಡು 20,256.03 ಅಂಕಗಳಿಗೆ ತಲುಪಿದೆ.
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 64.35 ಪಾಯಿಂಟ್‌ಗಳ ಏರಿಕೆ ಕಂಡು 6,060.35 ಅಂಕಗಳಿಗೆ ಏರಿಕೆ ಕಂಡಿದೆ.
ಸ್ಟೆರ್ಲೈಟ್ ಇಂಡಸ್ಟ್ರೀಸ್, ಹಿಂಡಾಲ್ಕೊ, ಜೆಎಸ್‌ಡಬ್ಲ್ಯು ಸ್ಟೀಲ್ ಶೇರುಗಳು ವಹಿವಾಟಿನ ಮುಕ್ತಾಯಕ್ಕೆ ಚೇತರಿಕೆ ಕಂಡಿವೆ.
ಗೀತಾಂಜಲಿ ವೆಂಚೂರ್ಸ್, ಮೈಂಡ್‌ಟ್ರಿ ಸೇರಿದಂತೆ ಹಲವು ಸಾಫ್ಟ್‌ವೇರ್ ಕಂಪೆನಿಯ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.