ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಬ್ಯಾಕಿಂಗ್, ಮಾಹಿತಿ ತಂತ್ರಜ್ಞಾನ ಶೇರುಗಳ ಖರೀದಿ ಹೆಚ್ಚಳ (Sensex | Infosys | HDFC | Nifty)
Bookmark and Share Feedback Print
 
ಆಹಾರ ಹಣದುಬ್ಬರ ದರ ಏರಿಕೆ ಮತ್ತು ಜಾಗತಿಕ ದುರ್ಬಲ ವಹಿವಾಟಿನ ಮಧ್ಯೆಯು, ಬ್ಯಾಕಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ವಹಿವಾಟು ಚೇತರಿಕೆ ಕಂಡಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನ ಮುಕ್ತಾಯಕ್ಕೆ 133 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಬಿಎಸ್‌ಇ-30 ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ 133.04 ಪಾಯಿಂಟ್‌ಗಳ ಏರಿಕೆ ಕಂಡು 20,389.07 ಅಂಕಗಳಿಗೆ ತಲುಪಿದೆ.

ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 41.50 ಪಾಯಿಂಟ್‌ಗಳ ಏರಿಕೆ ಕಂಡು 6,100 ಅಂಕಗಳಿಗೆ ತಲುಪಿದೆ.

ಏಷ್ಯಾದ ಮಾರುಕಟ್ಟೆಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದರಿಂದ, ಹೂಡಿಕೆದಾರರು ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ