ಕಂಪೆನಿಗಳ ತ್ರೈಮಾಸಿಕ ಫಲಿತಾಂಶಗಳಿಂದಾಗಿ ಮುಂದಿನ ವರ್ಷದಲ್ಲಿ ವಹಿವಾಟು ಚೇತರಿಕೆಯಾಗುವ ನಿರೀಕ್ಷೆಯಿಂದಾಗಿ, ವಹಿವಾಟಿನ ಮುಕ್ತಾಯಕ್ಕೆ 120 ಪಾಯಿಂಟ್‌ಗಳ ಏರಿಕೆ ಕಂಡಿದೆ.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 363 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ-30ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 120.02 ಪಾಯಿಂಟ್‌ಗಳ ಏರಿಕೆ ಕಂಡು 20,509.09 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 32.65 ಪಾಯಿಂಟ್‌ಗಳ ಏರಿಕೆ ಕಂಡು 6,134.50 ಅಂಕಗಳಿಗೆ ತಲುಪಿದೆ.
ರಿಯಲ್ಟಿ ಕ್ಷೇತ್ರ, ಬ್ಯಾಕಿಂಗ್ ಕ್ಷೇತ್ರ, ಅಟೋ ಸೂಚ್ಯಂಕ ಮತ್ತು ಗೃಹೋಪಕರಣ ವಸ್ತು ಸೂಚ್ಯಂಕ ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.