ಏಷ್ಯಾ ಮಾರುಕಟ್ಟೆಗಳ ತೊಳಲಾಟದ ವಹಿವಾಟಿನಿಂದಾಗಿ,ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇರುಪೇಟೆ ಸೂಚ್ಯಂಕ 77 ಪಾಯಿಂಟ್‌ಗಳ ಕುಸಿತದೊಂದಿಗೆ ಅಂತ್ಯವಾಗಿದೆ.
20,617.38 ಅಂಕಗಳೊಂದಿಗೆ ಆರಂಭವಾದ ಬಿಎಸ್‌ಇ-30 ಸೂಚ್ಯಂಕದ ವಹಿವಾಟು 77.44 ಪಾಯಿಂಟ್‌ಗಳ ಇಳಿಕೆ ಕಂಡು 20,483.61 ಅಂಕಗಳಿಗೆ ತಲುಪಿದೆ.
ರಾಷ್ಟೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 20.1 ಪಾಯಿಂಟ್‌ಗಳ ಕುಸಿತ ಕಂಡು 6,137.5 ಅಂಕಗಳಿಗೆ ತಲುಪಿದೆ.
ಬಿಎಸ್‌ಇ-ಮಿಡ್‌ಕ್ಯಾಪ್ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.0.29 ಪಾಯಿಂಟ್‌ಗಳ ಏರಿಕೆ ಕಂಡಿದೆ ಬಿಎಸ್‌ಇ-ಸ್ಮಾಲ್‌ಕ್ಯಾಪ್ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.0.24 ಪಾಯಿಂಟ್‌ಗಳ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.