ಸೆನ್ಸೆಕ್ಸ್: ಬ್ಯಾಂಕಿಂಗ್, ರಿಯಲ್ಟಿ ಶೇರು ವಹಿವಾಟು ಕುಸಿತ
ಮುಂಬೈ, ಶುಕ್ರವಾರ, 7 ಜನವರಿ 2011( 10:44 IST )
PTI
ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟು ಹಾಗೂ ಆಹಾರ ಹಣದುಬ್ಬರ ಏರಿಕೆಯ ಹಿನ್ನೆಲೆಯಲ್ಲಿ,ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 57 ಪಾಯಿಂಟ್‌ಗಳ ಕುಸಿತ ಕಂಡಿದೆ.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ 375 ಪಾಯಿಂಟ್‌ಗಳನ್ನು ಕಳೆದುಕೊಂಡ ಬಿಎಸ್‌ಇ-30 ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 57.14 ಪಾಯಿಂಟ್‌ಗಳ ಕುಸಿತ ಕಂಡು 20,127.60 ಅಂಕಗಳಿಗೆ ತಲುಪಿದೆ.
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 19.60 ಪಾಯಿಂಟ್‌ಗಳ ಇಳಿಕೆ ಕಂಡು 6,028.65 ಅಂಕಗಳಿಗೆ ಕುಸಿತ ಕಂಡಿದೆ.
ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟು ಹಾಗೂ ಆಹಾರ ಹಣದುಬ್ಬರ ದರ ಶೇ.18.32ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ, ಹೂಡಿಕೆದಾರರು, ರಿಟೇಲ್ ವಹಿವಾಟುದಾರರು ಶೇರುಗಳ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬಂಡವಾಳ ಯಂತ್ರಗಳು, ಬ್ಯಾಂಕಿಂಗ್, ವಾಹನೋದ್ಯಮ ಮತ್ತು ಉಕ್ಕು ಕ್ಷೇತ್ರದ ಶೇರುಗಳ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿದೆ.
ಏತನ್ಮಧ್ಯೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.14ರಷ್ಟು ಇಳಿಕೆ ಕಂಡಿದೆ.ಏತನ್ಮಧ್ಯೆ ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಶೇ.0.22ರಷ್ಟು ಕುಸಿತ ಕಂಡಿದೆ.
ಅಮೆರಿಕದ ಡೊ ಜೊನ್ಸ್ ಮಾರುಕಟ್ಟೆ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.0.22ರಷ್ಟು ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.