ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಶೇರು ಮಾರುಕಟ್ಟೆ: 467 ಅಂಶ ಕಳಚಿಕೊಂಡ ಸೆನ್ಸೆಕ್ಸ್ (Sensex | Share Market | Mumbai | Nifty | Market Index | NSE | BSE)
Bookmark and Share Feedback Print
 
ಸತತ ಐದನೇ ಅವಧಿಗೆ ಕುಸಿತ ಕಾಣುತ್ತಲೇ ಹೋದ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್, ಸೋಮವಾರ ವಹಿವಾಟು ಅಂತ್ಯದ ವೇಳೆಗೆ 467 ಅಂಶ ಕಳೆದುಕೊಂಡಿತು. ಇದಕ್ಕೆ ಪ್ರಮುಖ ಕಾರಣ, ಭಾರತೀಯ ರಿಸರ್ವ್ ಬ್ಯಾಂಕು ಬಡ್ಡಿ ದರಗಳನ್ನು ಹೆಚ್ಚು ಮಾಡಲಿದೆ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ಮಾರುಕಟ್ಟೆಗಳಿಂದ ನಿಧಿಯನ್ನು ಬೇರೆಡೆ ಹೂಡುತ್ತವೆ ಎಂಬ ಆತಂಕ.

ಕಳೆದ ನಾಲ್ಕು ಅವಧಿಗಳಲ್ಲಿ 868 ಅಂಶ ಕಳೆದುಕೊಂಡಿದ್ದ 30 ಶೇರುಗಳ ಸೂಚ್ಯಂಕ ಸೆನ್ಸೆಕ್ಸ್, ಸೋಮವಾರ ವಹಿವಾಟು ಕೊನೆಗೊಂಡಾಗ ಶುಕ್ರವಾರದ ಅಂತ್ಯಕ್ಕಿಂತ 467.69 ಅಂಶ ಕಳೆದುಕೊಂಡು 19,224.12 ಅಂಶಗಳಲ್ಲಿ ಅಂತ್ಯವಾಯಿತು. ಜನವರಿ 7ರಂದು ಈ ರೀತಿಯಲ್ಲೇ 493 ಅಂಶಗಳ ದಾಖಲೆಯ ಪತನವನ್ನೂ ಸೂಚ್ಯಂಕವು ಕಂಡಿತ್ತು.

ವಿಸ್ತೃತ ಆಧಾರದ ರಾಷ್ಟ್ರೀಯ ಶೇರು ವಿನಿಮಯ ಸೂಚ್ಯಂಕ ನಿಫ್ಟಿ ಕೂಡ ದಿನದಂತ್ಯಕ್ಕೆ 141.75 ಅಂಶ ಪತನಗೊಂಡು, 5762.85ರಲ್ಲಿ ಕೊನೆಗೊಂಡಿತು.

ಈರುಳ್ಳಿ, ತರಕಾರಿ, ಹಾಲು ಬೆಲೆ ಏರಿಕೆಯಿಂದಾಗಿ ಕಳೆದ ವಾರ ಹಣದುಬ್ಬರವು ಒಂದು ವರ್ಷ ಹಿಂದಿನ ಹಂತಕ್ಕೆ ಅಂದರೆ ಶೇ.18.32ಕ್ಕೆ ಏರಿತ್ತು. ಆಹಾರ ಹಣದುಬ್ಬರ ದರ ಹೆಚ್ಚಿದರೆ, ಭಾರತೀಯ ರಿಸರ್ವ್ ಬ್ಯಾಂಕು ಈ ತಿಂಗಳು ತನ್ನ ಹಣಕಾಸು ನೀತಿಯನ್ನು ಮತ್ತಷ್ಟು ಬಿಗಿಗೊಳಿಸುತ್ತದೆ ಎಂಬ ಆತಂಕದಿಂದಾಗಿ ಶೇರುದಾರರು ಜೋರಾಗಿಯೇ ಮಾರಾಟದಲ್ಲಿ ತೊಡಗಿರುವುದು, ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ