ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರುಗತಿಯೊಂದಿಗೆ ಆರಂಭ ಕಂಡ ಸೆನ್ಸೆಕ್ಸ್, ನಿಫ್ಟಿ
(Sensex | Share Market | Mumbai | Nifty | Market Index | NSE | BSE)
ಆರು ವಹಿವಾಟಿನ ಅವಧಿಗಳಲ್ಲಿ ಮೊದಲ ಬಾರಿಗೆ ತಿರುಗಿ ಮೇಲೆದ್ದು ನಿಂತ ಸೆನ್ಸೆಕ್ಸ್, ಮಂಗಳವಾರ 158 ಅಂಶ ಏರಿಕೆಯೊಂದಿಗೆ ಆರಂಭಗೊಂಡಿತು.
ಕಳೆದ ಐದು ಅವಧಿಗಳಲ್ಲಿ 1335 ಅಂಶ ಕಳೆದುಕೊಂಡಿದ್ದ ಮುಂಬೈ ಶೇರು ಸೂಚ್ಯಂಕ ಸೆನ್ಸೆಕ್ಸ್, ಶೇ. 0.96ರಷ್ಟು ಏರಿಕೆ ಕಂಡು 19,409.12ರಲ್ಲಿ ಆರಂಭವಾಯಿತು. ಬ್ಯಾಂಕಿಂಗ್ ಮತ್ತು ಆಟೋ ವಲಯಗಳ ಶೇರುಗಳು ಏರುಗತಿಯಲ್ಲಿದ್ದವು.
ಅದೇ ರೀತಿ ರಾಷ್ಟ್ರೀಯ ಶೇರು ವಿನಿಮಯ ಸೂಚ್ಯಂಕ ನಿಫ್ಟಿ ಕೂಡ 60.10ರಷ್ಟು (ಶೇ.1.04) ಏರಿಕೆ ಕಂಡು 5826.40 ಅಂಶಗಳೊಂದಿಗೆ ಆರಂಭವಾಗಿ ಮಾರುಕಟ್ಟೆಯಲ್ಲಿ ಒಂದಿಷ್ಟು ಸಮಾಧಾನ ಮೂಡಿಸಿತು. ಆದರೆ ಅದು ಇದೇ ಏರುಗತಿಯನ್ನು ಕಾಯ್ದುಕೊಳ್ಳುತ್ತದೆಯೇ ಎಂಬುದು ನಿಗೂಢವಾಗಿಯೇ ಇದೆ.