ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕುಸಿತದ ಅಭಿಯಾನ ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ
(Sensex | Share Market | Mumbai | Nifty | Market Index | NSE | BSE)
ಕುಸಿತದ ಅಭಿಯಾನವನ್ನು ಸತತ ಆರನೇ ದಿನವೂ ಮುಂದುವರಿಸಿದ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಮಂಗಳವಾರ ದಿನದಂತ್ಯ ಬಿಎಸ್ಇ ಸೂಚ್ಯಂಕವು 28 ಅಂಶ ಕುಸಿಯಿತು.
ಕಳೆದ ಐದು ಸೆಶನ್‌ಗಳಲ್ಲಿ 1335 ಅಂಶ ಕಳೆದುಕೊಂಡಿದ್ದ ಸೆನ್ಸೆಕ್ಸ್, ನಾಲ್ಕು ತಿಂಗಳಷ್ಟು ಹಿಂದಿನ ಸ್ಥಿತಿಗೆ ಕುಸಿದು, 27.78 ಅಂಶ ಕಳೆದುಕೊಂಡು 19,196.34ರಲ್ಲಿ ಅಂತ್ಯಗೊಂಡಿತು. ಸ್ಥಿರಾಸ್ಥಿ, ಐಟಿ ಮತ್ತು ರಿಫೈನರಿ ವಲಯದ ಶೇರುಗಳು ತೀವ್ರ ನಷ್ಟ ಅನುಭವಿಸಿದವು.
30 ಶೇರುಗಳ ಬಿಎಸ್ಇ ಸೂಚ್ಯಂಕದಲ್ಲಿ 14 ಸ್ಟಾಕುಗಳು ನಷ್ಟ ಅನುಭವಿಸಿದರೆ, 16 ಸ್ಟಾಕುಗಳು ಗಳಿಕೆ ದಾಖಲಿಸಿದವು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಟೆಕ್ನಾಲಜೀಸ್ ಶೇರುಗಳು ಮಂಗಳವಾರ ತೀವ್ರ ನಷ್ಟಕ್ಕೀಡಾದವು.
ವಿಶಾಲವಾದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ ಕೂಡ 8.75 ಅಂಶ ಕಳೆದುಕೊಂಡು, ದಿನದಂತ್ಯಕ್ಕೆ 5754.10ಕ್ಕೆ ತಲುಪಿತು.