ಆರಂಭಿಕ ವಹಿವಾಟಿನಲ್ಲಿ ಬುಧವಾರ ಮುಂಬೈ ಶೇರು ಸೂಚ್ಯಂಕ ಸೆನ್ಸೆಕ್ಸ್ 183 ಅಂಶ ಮೇಲಕ್ಕೇರಿದ್ದು, ಆರು ದಿನಗಳ ಸತತ ನಷ್ಟದ ನಡುವೆ ಕೊಂಚ ಆಶಾವಾದ ಮೂಡಿಸಿದೆ.
ಕಳೆದ ಆರು ಅವಧಿಗಳಲ್ಲಿ 1365ರಷ್ಟು ಅಂಶಗಳನ್ನು ಕಳೆದುಕೊಂಡಿದ್ದ ಮಾರುಕಟ್ಟೆ ಸೂಚ್ಯಂಕವು, ಬುಧವಾರ ಬೆಳಿಗ್ಗೆ ವಹಿವಾಟು ಆರಂಭವಾದಾಗ 183.21 ಅಂಶ ಮೇಲಕ್ಕೇರಿ, 19,379.55ರಲ್ಲಿ ವಹಿವಾಟಿಗೆ ಚಾಲನೆ ದೊರೆಯಿತು. ಬ್ಯಾಂಕಿಂಗ್, ಐಟಿ, ತೈಲ ಮತ್ತು ಅನಿಲ ಹಾಗೂ ಸ್ಥಿರಾಸ್ಥಿ ಶೇರುಗಳು ಲಾಭ ದಾಖಲಿಸಿದ್ದವು.
ಅದೇ ರೀತಿ, ವಿಶಾಲ ಭೂಮಿಕೆಯ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಕೂಡ 61.65 ಅಂಶ ಮೇಲಕ್ಕೇರಿ, 5815.75ರಲ್ಲಿ ವಹಿವಾಟು ಆರಂಭಿಸಿದೆ.
ಮಾರುಕಟ್ಟೆಯು ಇದೇ ಗತಿಯನ್ನು ದಿನವಿಡೀ ಕಾಯ್ದುಕೊಳ್ಳುತ್ತದೆಯೇ ಎಂಬುದು ಶೇರು ಹೂಡಿಕೆದಾರರ ಆಶಾವಾದ.