ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಹೊಸ ಆಶಾವಾದ: ಕೊನೆಗೂ 338 ಅಂಶ ಮೇಲೇರಿದ ಸೆನ್ಸೆಕ್ಸ್
(Sensex | Share Market | Mumbai | Nifty | Market Index | NSE | BSE)
ಬಾಂಬೇ ಶೇರು ವಿನಿಮಯ ಕೇಂದ್ರದ ಪ್ರಧಾನ ಸೂಚ್ಯಂಕ ಸೆನ್ಸೆಕ್ಸ್ ಕೊನೆಗೂ ಸತತ ಆರು ಅವಧಿಗಳ ಕುಸಿತವನ್ನು ಮೆಟ್ಟಿ ನಿಂತಿದ್ದು, ಬುಧವಾರ 337.76 ಅಂಶಗಳಷ್ಟು ಮೇಲಕ್ಕೇರಿ, 19,534.10ರಲ್ಲಿ ಕೊನೆಗೊಂಡಿತು.
ದಿನವಿಡೀ ಕನಿಷ್ಠ 19,048.56 ಮತ್ತು ಗರಿಷ್ಠ 19,574.63 ನಡುವೆ ಓಲಾಡಿದ ಸೂಚ್ಯಂಕವು, ಕೊನೆಗೂ 19.5 ಸಾವಿರಕ್ಕಿಂತ ಮೇಲೆ ಬಂದು, ಮಾರುಕಟ್ಟೆಯಲ್ಲಿ ಉತ್ಸಾಹ ಮೂಡಿಸಿತು.
ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ನಿಫ್ಟಿ ಸೂಚ್ಯಂಕವೂ ದಿನದಲ್ಲಿ 109.15 ಅಂಶ ಏರಿಕೆ ಕಂಡು, 5863.25ರಲ್ಲಿ ಕೊನೆಗೊಂಡಿತು.
ದಿನದಲ್ಲಿ ಗರಿಷ್ಠ 5874.20ರವರೆಗೂ ಹೋಗಿದ್ದ ನಿಫ್ಟಿ ಸೂಚ್ಯಂಕವು, 5711.30ರ ಮಟ್ಟಕ್ಕೂ ಇಳಿದಿತ್ತು.