ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಇನ್ಫೋಸಿಸ್ ತ್ರೈಮಾಸಿಕ ವರದಿ: ಕುಸಿದ ಮುಂಬೈ ಮಾರುಕಟ್ಟೆ (Sensex | Share Market | Mumbai | Nifty | Market Index | NSE | BSE)
Bookmark and Share Feedback Print
 
ಇನ್ಫೋಸಿಸ್ ಟೆಕ್ನಾಲಜೀಸ್ ತನ್ನ ಮೂರನೇ ತ್ರೈಮಾಸಿಕ ಅವಧಿಯ ಲೆಕ್ಕಪತ್ರಗಳನ್ನು ಮಂಡಿಸಿದ್ದು, ಲಾಭಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣದಿಂದಾಗಿ ಮಾರುಕಟ್ಟೆ ಮೇಲೂ ಪ್ರಭಾವವಾಗಿದೆ. ಗುರುವಾರ ಮುಂಬೈ ಶೇರು ವಿನಿಮಯ ಕೇಂದ್ರದ ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ವಹಿವಾಟು ಆರಂಭವಾದಾಗಲೇ 117 ಅಂಶಗಳನ್ನು ಕಳೆದುಕೊಂಡಿತು.

ಹಿಂದಿನ ಅವಧಿಯಲ್ಲಿ 338 ಅಂಶ ಏರಿಕೆ ಕಂಡಿದ್ದ ಸೆನ್ಸೆಕ್ಸ್, ಇಂದು ಬೆಳಿಗ್ಗೆ 116.95 ಕುಸಿದು 19,417.15ರಲ್ಲಿ ಆರಂಭವಾಯಿತು.

ಇದೇ ರೀತಿ ರಾಷ್ಟ್ರೀಯ ಶೇರು ವಿನಿಮಯ ಸೂಚ್ಯಂಕ ನಿಫ್ಟಿ ಕೂಡ 32.15 ಅಂಶ ಕಳೆದುಕೊಂಡು 5831.10ರಲ್ಲಿ ವಹಿವಾಟು ಪ್ರಾರಂಭಿಸಿತು.

ಆದರೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸ್ಥಿರತೆ ಕಂಡುಬಂದಿರುವುದರಿಂದಾಗಿ, ನಷ್ಟದ ಪ್ರಮಾಣ ತಗ್ಗಿದೆ ಎಂದು ಅಂದಾಜಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ