ಬುಧವಾರದ ವಹಿವಾಟಿನಲ್ಲಿ ಲಾಭ ಗಳಿಸಿದ ಪ್ರಮುಖ ಶೇರುಗಳನ್ನು ವರ್ತಕರು ಮಾರಾಟ ಮಾಡುವುದರಲ್ಲೇ ತಲ್ಲೀನರಾದ ಪರಿಣಾಮ ಗುರುವಾರ ಭಾರತೀಯ ಶೇರು ಮಾರುಕಟ್ಟೆಯ ಪ್ರಧಾನ ಸೂಚ್ಯಂಕ ಸೆನ್ಸೆಕ್ಸ್ 351 ಅಂಶ ಕಳೆದುಕೊಂಡು, ಶೇರುದಾರರನ್ನು ಕಂಗಾಲಾಗಿಸಿತು.
19492.3ರಲ್ಲಿ ವಹಿವಾಟು ಆರಂಭಿಸಿದ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್, ದಿನದಂತ್ಯದಲ್ಲಿ 351 ಅಂಶ ಕೆಳಗಿಳಿದು, 19,183 ರಲ್ಲಿ ಅಂತ್ಯಗೊಂಡಿತು.
50 ಶೇರುಗಳ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಕೂಡ 111 ಅಂಶ ಕುಸಿತ ಕಂಡು, 5752ರಲ್ಲಿ ಕೊನೆಗೊಂಡಿತು.
ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ, ಎಸ್‌ಬಿಐ ಮುಂತಾದ ಬ್ಯಾಂಕಿಂಗ್, ಐಟಿ, ಮತ್ತು ಗ್ರಾಹಕೋತ್ಪನ್ನ ಸಂಬಂಧಿತ ಶೇರುಗಳು ನಷ್ಟ ಅನುಭವಿಸಿದರೆ, ರಿಲಯನ್ಸ್ ಕಾಂ, ಒಎನ್‌ಜಿಸಿ, ಡಿಎಲ್ಎಫ್ ಮತ್ತು ಬಜಾಜ್ ಆಟೋ ಮುಂತಾದವುಗಳು ಲಾಭ ಗಳಿಸಿದವು.