ಮಾರುಕಟ್ಟೆ ಅಪಾಯಗಳ ಕುರಿತು ಎಚ್ಚರದಿಂದಿರುವಂತೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (ಸೆಕ್ಯುರಿಟೀಸ್ ಎಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.
ಅಕ್ರಮ ಮತ್ತು ವಂಚನಾತ್ಮಕ ಕೃತ್ಯಗಳನ್ನು ತಡೆಯಲು ಸೆಬಿಯು ತನ್ನ ನಿಯಮಾವಳಿಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಹೂಡಿಕೆ ಮಾರುಕಟ್ಟೆಯ ಮೇಲೆ ಹದ್ದಿನ ಕಣ್ಣಿಡುತ್ತಿದೆ ಎಂದು ಸೆಬಿ ಅಧ್ಯಕ್ಷ ಸಿ.ಬಿ.ಭಾವೆ ಅವರು ಹೂಡಿಕೆದಾರರ ಸಂರಕ್ಷಣೆ ಕುರಿತ ರಾಷ್ಟ್ರೀಯ ಸೆಮಿನಾರ್‌ನಲ್ಲಿ ಮಾತನಾಡುತ್ತಾ ತಿಳಿಸಿದರು.
ಸೆಬಿಯು 1995ರಿಂದ 2008ರ ನಡುವಿನ 13 ವರ್ಷಗಳಲ್ಲಿ ನಿಯಮಾವಳಿ ಉಲ್ಲಂಘಿಸಿದ ಹೂಡಿಕೆದಾರರಿಂದ ದಂಡ ಶುಲ್ಕದ ರೂಪದಲ್ಲಿ 15 ಕೋಟಿ ರೂಪಾಯಿ ಸಂಗ್ರಹಿಸಿದ್ದರೆ, ಕಳೆದ ಎರಡೇ ವರ್ಷಗಳಲ್ಲಿ (2008-2010) ನೂರು ಕೋಟಿ ದಂಡ ಶುಲ್ಕ ಸಂಗ್ರಹವಾಗಿದೆ ಎಂದವರು ಹೇಳಿದರು.