ಕೊನೆಯ ಹತ್ತು ಅವಧಿಗಳಲ್ಲಿ ತೀವ್ರ ನಷ್ಟ ಅನುಭವಿಸಿದ್ದ ಮುಂಬೈ ಶೇರು ಮಾರುಕಟ್ಟೆ, ಕೊನೆಗೂ ಸೋಮವಾರ ನಷ್ಟವನ್ನು ಮೆಟ್ಟಿ ನಿಂತಿದ್ದು, ಅಲ್ಪ ಮಟ್ಟದ ಚೇತರಿಕೆ ಕಂಡಿತು. ದಿನದ ವಹಿವಲಾಟು ಅಂತ್ಯವಾಗುವಾಗ, ಮುಂಬೈ ಶೇರು ಸೂಚ್ಯಂಕ ಸೆನ್ಸೆಕ್ಸ್ ಕೊನೆಯ ಗಳಿಗೆಯಲ್ಲಿ 22 ಅಂಕ ಸೇರ್ಪಡೆಯೊಂದಿಗೆ 18,882.25 ಅಂಶದಲ್ಲಿದ್ದರೆ, ನಿಫ್ಟಿ 5,654.75 ಅಂಕದಲ್ಲಿತ್ತು.
ಐಟಿ ವಿಭಾಗದ ಪ್ರಮುಖ ಕಂಪನಿ ಟಿಸಿಎಸ್‌ನ ತ್ರೈಮಾಸಿಕ ವರದಿ ಪ್ರಕಟಗುವ ನಿರೀಕ್ಷೆಯಲ್ಲಿ ಅದರ ಶೇರುಗಳು ಶೇ. 1.74ರಷ್ಟು ಏರಿಕೆ ಕಂಡವು. ಹಾಗೂ ಕಳೆದ ವಾರ ಹಿನ್ನಡೆ ಅನುಭವಿಸಿದ್ದ ಇನ್ಫೋಸಿಸ್ ಶೇ. 2.06 ರಷ್ಟು ಚೇತರಿಕೆ ಕಂಡಿತು.
ಬ್ಯಾಂಕಿಂಗ್ ಕ್ಷೇತ್ರಗಳಲ್ಲಿಯೂ ಅಲ್ಪಪ್ರಮಾಣದ ಚೇತರಿಕೆ ಕಂಡುಬಂತು. ಆಕ್ಸಿಸ್ ಬ್ಯಾಂಕ್ ಶೇರುಗಳು ಶೇ.2ಕ್ಕಿಂತ ಹೆಚ್ಚು ಗಳಿಕೆ ದಾಖಲಿಸಿತು. ಆದರೆ, ಇಂಡಸ್‍ಇಂಡ್ ಬ್ಯಾಂಕು ಶೇ.75ರಷ್ಟು ಲಾಭ ಘೋಷಿಸಿದ್ದರೂ, ಅದರ ಶೇರುಗಳು ಶೇ.0.7ರಷ್ಟು ಕುಸಿತ ಕಂಡವು.
ಇದೇ ರೀತಿ, ಲೋಹ, ವಿದ್ಯುತ್, ಸ್ಥಿರಾಸ್ಥಿ, ವಾಹನ ಮತ್ತು ಸರಕು ಸೂಚ್ಯಂಕಗಳು ಋಣಾತ್ಮಕ ದಿಕ್ಕಿನಲ್ಲಿ ಸಾಗಿದವು.