ಹತ್ತು ದಿನಗಳ ಕುಸಿತದ ಸರಪಣಿಯ ಬಳಿಕ ಸತತ ಎರಡನೇ ದಿನವೂ ಏರಿಕೆ ಕಂಡ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್, ಮಂಗಳವಾರ ವಹಿವಾಟು ಪೂರ್ಣಗೊಳಿಸಿದಾಗ 210 ಅಂಶ ಮೇಲಕ್ಕೇರಿ 19 ಸಾವಿರಕ್ಕಿಂತ ಮೇಲೆ ಸ್ಥಿರವಾಯಿತು.
ಸಾಫ್ಟ್‌ವೇರ್ ಮತ್ತು ಲೋಹದ ಶೇರುಗಳು ಉತ್ತಮ ನಿರ್ವಹಣೆ ತೋರಿದ್ದರಿಂದ ಉತ್ತೇಜನ ಪಡೆದ ಸೆನ್ಸೆಕ್ಸ್, 209.80 ಅಂಶ ಮೇಲಕ್ಕೇರಿ 19,092.05ರಲ್ಲಿ ಅಂತ್ಯವಾಯಿತು.
ಇದೇ ರೀತಿ, ವಿಸ್ತೃತ ಆಧಾರದ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ದಿನದಂತ್ಯಕ್ಕೆ 69.30 ಅಂಶ ಮೇಲಕ್ಕೇರಿ 5724.05ರಲ್ಲಿ ಸ್ಥಿರವಾಯಿತು.
ಸಾಫ್ಟ್‌ವೇರ್ ಕಂಪನಿ ಟಿಸಿಎಸ್ 3ನೇ ತ್ರೈಮಾಸಿಕ ಅವದಿಯಲ್ಲಿ ಶೇ.30ರಷ್ಟು ಲಾಭ ಘೋಷಿಸಿದ್ದರಿಂದ ಮಾರುಕಟ್ಟೆಯೂ ಉತ್ತೇಜನ ಪಡೆಯಿತು.