ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ನಷ್ಟಕ್ಕೆ ಮರಳಿದ ಮಾರುಕಟ್ಟೆ: 114 ಅಂಶ ಕುಸಿದ ಸೆನ್ಸೆಕ್ಸ್ (Sensex | Share Market | Mumbai | Nifty | Market Index | NSE | BSE)
ನಷ್ಟಕ್ಕೆ ಮರಳಿದ ಮಾರುಕಟ್ಟೆ: 114 ಅಂಶ ಕುಸಿದ ಸೆನ್ಸೆಕ್ಸ್
ಮುಂಬೈ, ಬುಧವಾರ, 19 ಜನವರಿ 2011( 19:28 IST )
ಎರಡು ದಿನಗಳ ಗಳಿಕೆಯ ಓಟವನ್ನು ನಿಲ್ಲಿಸಿದ ಮುಂಬೈ ಶೇರು ಮಾರುಕಟ್ಟೆ, ಬುಧವಾರ 114 ಅಂಶಗಳನ್ನು ಕಳೆದುಕೊಂಡು 19 ಸಾವಿರಕ್ಕಿಂತ ಕೆಳಗೆ ವಹಿವಾಟು ಕೊನೆಗೊಳಿಸಿತು.
30 ಶೇರುಗಳ ಸೂಚ್ಯಂಕವು 113.73 ಅಂಶ ಕೆಳಗಿಳಿದು 18,978.32ರಲ್ಲಿ ದಿನದ ವಹಿವಾಟು ಮುಗಿಸಿತು. ಈ ಹಿಂದಿನ ಎರಡು ಅವಧಿಗಳಲ್ಲಿ ಸೆನ್ಸೆಕ್ಸ್ 230 ಅಂಶ ಗಳಿಕೆ ದಾಖಲಿಸಿತ್ತು.
ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಕೂಡ 33 ಅಂಶಗಳನ್ನು ಕಳೆದುಕೊಂಡು, 5691.05ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಬೆಲೆ ಏರಿಕೆ, ಬಡ್ಡಿ ದರ ಏರಿಕೆಯ ಆತಂಕ ಮತ್ತು ಕೇಂದ್ರ ಸಂಪುಟ ವಿಸ್ತರಣೆಯೂ ಮಾರುಕಟ್ಟೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲು ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.