ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕುಸಿತ ಮುಂದುವರಿಸಿದ ಮಾರುಕಟ್ಟೆ, ಸೆನ್ಸೆಕ್ಸ್ 154 ಅಂಶ ನಷ್ಟ
(Sensex | Share Market | Mumbai | Nifty | Market Index | NSE | BSE)
ಕುಸಿತ ಮುಂದುವರಿಸಿದ ಮಾರುಕಟ್ಟೆ, ಸೆನ್ಸೆಕ್ಸ್ 154 ಅಂಶ ನಷ್ಟ
ಮುಂಬೈ, ಗುರುವಾರ, 20 ಜನವರಿ 2011( 11:02 IST )
ಮುಂಬೈ ಶೇರು ಮಾರುಕಟ್ಟೆಯು ತನ್ನ ಇಳಿಮುಖ ಯಾನವನ್ನು ಮುಂದುವರಿಸಿದ್ದು, ಗುರುವಾರ ಬೆಳಿಗ್ಗೆ ವಹಿವಾಟು ಆರಂಭವಾದಾಗಲೇ ಸೆನ್ಸೆಕ್ಸ್ 154 ಅಂಶ ಕುಸಿತ ಕಂಡಿತು. ದುರ್ಬಲ ಏಷ್ಯಾ ಮಾರುಕಟ್ಟೆಗೆ ಅನುಗುಣವಾಗಿ ಶೇರುದಾರರು ಶೇರುಗಳ ಮಾರಾಟದಲ್ಲಿ ತೊಡಗಿದ್ದರಿಂದ ಈ ಹಿನ್ನಡೆ ಕಂಡುಬಂದಿದೆ.
ಹಿಂದಿನ ಅವಧಿಯಲ್ಲಿ 113.73 ಅಂಶ ಕುಸಿದಿದ್ದ 30 ಶೇರುಗಳ ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ ವಹಿವಾಟು ಪ್ರಾರಂಭವಾಗುತ್ತಿದ್ದಂತೆಯೇ ಇನ್ನೂ 154.10 ಅಂಶ ಪತನಗೊಂಡು, 18,824.22ರಲ್ಲಿ ಆರಂಭ ಕಂಡಿತು.
ಇದೇ ರೀತಿ, ವಿಸ್ತೃತ ಆಧಾರದ ರಾಷ್ಟ್ರೀಯ ಶೇರು ವಿನಿಮಯ ಸೂಚ್ಯಂಕ ನಿಫ್ಟಿಯೂ 46.65 ಅಂಶ ಕುಸಿತ ಕಂಡು 5644.10ರಲ್ಲಿ ವಹಿವಾಟನ್ನು ಆರಂಭಿಸಿತು.