ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಛತ್ತೀಸ್‌ಗಢ: ಅಂತಿಮ ಹಂತದ ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಛತ್ತೀಸ್‌ಗಢ: ಅಂತಿಮ ಹಂತದ ಮತದಾನ ಆರಂಭ
ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಎರಡನೆ ಮತ್ತು ಅಂತಿಮ ಹಂತದ ಮತದಾನ ಆರಂಭವಾಗಿದೆ.

ಆಡಳಿತಾರೂಢಾ ಭಾರತೀಯ ಜನತಾಪಕ್ಷ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಕತ್ತುಕತ್ತಿನ ಹೊರಾಟ ನಡೆಯುತ್ತಿದೆ.
ದ್ವಿತೀಯ ಹಂತದಲ್ಲಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ 51 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಬಿಜೆಪಿ ಮತ್ತು ಬಿಎಸ್ಪಿ ಎಲ್ಲಾ 51 ಸ್ಥಾನಗಳಲ್ಲಿ ಸ್ಫರ್ಧಿಸುತ್ತಿದ್ದರೆ, ಕಾಂಗ್ರೆಸ್ 48 ಕ್ಷೇತ್ರಗಳಲ್ಲಿ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದು ಉಳಿದ ಮೂರು ಸ್ಥಾನಗಳಾದ ಚಂದ್ರಾಪುರ, ಸಮ್ರಿ ಮತ್ತು ಮನೇಂದ್ರಗಢ ಸ್ಥಾನಗಳನ್ನು ತನ್ನ ಮೈತ್ರಿ ಕೂಟದ ಪಾಲುದಾರ ಪಕ್ಷವಾಗಿರುವ ನ್ಯಾಶನಲ್ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ವಿ.ಸಿ.ಶುಕ್ಲ ನೇತೃತ್ವದಲ್ಲಿ ಎನ್‌ಸಿಪಿಯು 2003ರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಹಾನಿಮಾಡಿತ್ತು. ಕಾಂಗ್ರೆಸ್‌ನ ಶೇ.7.02ರಷ್ಟು ಕಾಂಗ್ರೆಸ್‌ನ ಜನಪ್ರಿಯ ಮತಗಳನ್ನು ಎನ್‌‌ಸಿಪಿ ಎಗರಿಸಿತ್ತು. ಆದರೆ ಈ ಬಾರಿ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಶುಕ್ಲ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಆದರೆ ಈ ಬಾರಿ ಬಿಎಸ್ಪಿಯ ಆನೆ ಕಾಂಗ್ರೆಸ್ ಮತಗಳನ್ನು ಪುಡಿ ಮಾಡುವ ಅಂದಾಜಿದೆ. ಬಿಎಸ್ಪಿಯು 'ಸರ್ವಜ್ಞ ಹಿತಾಯ' ಎಂಬ ಘೋಷ ವಾಕ್ಯದೊಂದಿಗೆ ಕಣಕ್ಕಿಳಿದಿದೆ.

ಈ ಮಧ್ಯೆ, ಕಾಂಗ್ರೆಸ್ ಮತ್ತು ಬಿಎಸ್ಪಿಗಳನ್ನು ಹಲವು ಕ್ಷೇತ್ರಗಳಲ್ಲಿ ಬಂಡುಕೋರರ ಕಾಟವೂ ಕಾಡುತ್ತಿದೆ.

ಇಂದು ನಡೆಯುತ್ತಿರುವ ಚುನಾವಣಾ ಕಣದಲ್ಲಿ ದೊಡ್ಡದೊಡ್ಡ ತಲೆಗಳ ಹಣೆಬರಹ ನಿರ್ಧಾರವಾಗಲಿದೆ. ರಾಯ್‌ಪುರ ದಕ್ಷಿಣದಲ್ಲಿ ಬ್ರಿಜ್‌ಮೋಹನ್ ಅಗರ್ವಾಲ್(ಬಿಜೆಪಿ) ಅವರು ಕಾಂಗ್ರೆಸ್‌ನ ಯೋಗೆಶ್ ತಿವಾರಿ ಎದುರು ಸ್ಪರ್ಧಿಸುತ್ತಿದ್ದರೆ, ಬಿಜೆಪಿಯ ರಾಜೇಶ್ ಮುದತ್ ರಾಯ್‌ಪುರ ಪಶ್ಚಿಮದಲ್ಲಿ ಕಾಂಗ್ರೆಸ್‌ನ ಸಂತೋಷ್ ಅಗರ್ವಾಲ್ ಸ್ಪರ್ಧಿಸಿದ್ದಾರೆ. ರಾಯ್‌ಪುರ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸತ್ಯೇಂದ್ರ ಶರ್ಮಾ ಮತ್ತು ಬಿಜೆಪಿಯ ನಂದಲಾಲ್ ಶರ್ಮಾ ಕಣದಲ್ಲಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ ಅಲ್ಲದೆ ಶಿನಸೇನೆ(32), ಗೊಂಡವಾನ ಗಣತಂತ್ರ ಪಕ್ಷ(35), ಲೋಕ ಜನಶಕ್ತಿ ಪಕ್ಷ(17), ಭಾರತೀಯ ಜನಶಕ್ತಿ ಪಕ್ಷ(19), ಜಾರ್ಖಂಜ್ ಮುಕ್ತಿ ಮೋರ್ಚಾ(14), ಸಿಪಿಐ(18), ಆರ್‌ಪಿಐ(10) ಪಕ್ಷಗಳು ಚುನಾವಣಾ ಕಣಗಳಲ್ಲಿವೆ.

ಇಂದಿನ ಮತದಾನದಲ್ಲಿ ಹೆಚ್ಚಿನ ಮತದಾರರು ಗ್ರಾಮೀಣ ಪ್ರದೇಶದವರು. ಮತದಾರರ ನಿಷ್ಠೆಯು ರಾಜಾ ಸಹಾಬ್ ಮತ್ತು ಕಿಲೋ ಒಂದರ ಮೂರು ರೂಪಾಯಿಗೆ ಅಕ್ಕಿ ಒದಗಿಸಿದ ಬಿಜೆಪಿ ನಡುವೆ ಹಂಚಿಹೋಗಿದೆ.

ಗುರುವಾರದ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಒಟ್ಟು 687 ಅಭ್ಯರ್ಥಿಗಳು ಕಣದಲ್ಲಿದ್ದು, 88,14,228 ಮಂದಿ ತಮ್ಮ ಸರ್ವೋಚ್ಚ ಹಕ್ಕನ್ನು ಚಲಾಯಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ, ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ಸಾಯ್, ಕಾಂಗ್ರೆಸ್ ಅಧ್ಯಕ್ಷ ಧಾನೇಂದ್ರ ಸಾಹು, ಉಪಸಭಾಪತಿ ಬದ್ರಿದರ್ ದಿವನ್ ಮತ್ತು ಗೃಹಸಚಿವ ರಾಮ್ ವಿತಾರ್ ನೇತಮ್ ಅವರುಗಳ ಅದೃಷ್ಟಪರೀಕ್ಷೆ ನಡೆಯುತ್ತಿದೆ.

ಇಂದಿನ ಚುನಾವಣೆ ನಡೆಯುತ್ತಿರುವ 51 ಕ್ಷೇತ್ರಗಳಲ್ಲಿ ಆರು ಪರಿಶಿಷ್ಟ ಜಾತಿ ಮತ್ತು 15 ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಮೀಸಲು.

ರಾಯ್‌ಪುರ, ಬಿಲ್ಸಾಪುರ, ಕೋಬ್ರ, ರಾಯ್‌ಗಡ, ಸರ್ಗುಜ, ಕೋರ್ಜ ಮತ್ತು ಜಂಜ್ಗೀರ್ ಮತ್ತು ಚಂಪಾ ಜಿಲ್ಲೆಗಳ 12,073 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದೆ. ಇವುಗಳಲ್ಲಿ 2,608 ಕ್ಷೇತ್ರಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.

ನವೆಂಬರ್ 14ರಂದು ನಡೆದ ಪ್ರಥಮ ಹಂತದ ಚುನಾವಣೆಯಲ್ಲಿ ಶೇ.55ರಷ್ಟು ಮತದಾನವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ