ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಮಿನಿ ಮಹಾಚುನಾವಣೆಯ ಆಖಾಡ ಸಿದ್ಧತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿನಿ ಮಹಾಚುನಾವಣೆಯ ಆಖಾಡ ಸಿದ್ಧತೆ
ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಡೆಯುತ್ತಿರುವ, ಸೆಮಿಫೈನಲ್ ಎಂದು ಪರಿಗಣಿತವಾಗಿರುವ ಆರು ರಾಜ್ಯಗಳ ವಿಧಾನ ಸಭಾ ಚುನಾವಣೆಗಳು ಘೋಷಣೆಯಾಗಿದ್ದು, ಪ್ರಮುಖ ಪಕ್ಷಗಳು ಗದ್ದುಗೆ ಏರಲು ಶತಾಯ ಗತಯ ಪ್ರಯತ್ನ ನಡೆಸುತ್ತಿವೆ.

ಆರು ರಾಜ್ಯಗಳ ಪೈಕಿ ಛತ್ತೀಸ್‌ಗಢದಲ್ಲಿ ಭದ್ರತಾ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಎರಡು ಹಂತದ ಚುನಾವಣೆಯಲ್ಲಿ ಮೊದಲ ಹಂತದ ಮತದಾನವು ನವೆಂಬರ್ 14ರಂದು ನಡೆದಿದ್ದರೆ, ದ್ವಿತೀಯ ಮತ್ತು ಅಂತಿಮ ಹಂತದ ಮತದಾನವು ನವೆಂಬರ್ 20ರ ಶುಕ್ರವಾರ ನಡೆಯುತ್ತಿದೆ.

ಉಳಿದಂತೆ ಮಧ್ಯಪ್ರದೇಶ(ನವೆಂಬರ್ 25), ದೆಹಲಿ (ನವೆಂಬರ್29), ಮಿಜೋರಾಂ (ನವೆಂಬರ್29) ಹಾಗೂ ರಾಜಸ್ಥಾನ (ಡಿಸೆಂಬರ್4)ಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ ಎಂಟರಂದು ಎಲ್ಲಾ ರಾಜ್ಯಗಳಲ್ಲಿ ಏಕಕಾಲಕ್ಕೆ ಮತಎಣಿಕೆ ನಡೆಯಲಿದೆ.

ಅಮರನಾಥ್ ಭೂವಿವಾದ ಸೇರಿದಂತೆ ಮತ್ತಿತರರ ಗಲಭೆಗಳಿಂದ ತೀವ್ರವಾಗಿ ಕಂಗೆಟ್ಟಿರುವ ಜಮ್ಮು ಕಾಶ್ಮೀರದಲ್ಲಿ ಮೊದಲ ಹಂತದ ಮತದಾನವಾಗಿದ್ದು, ನವೆಂಬರ್ 23ರಂದು ಎರಡನೆ ಹಂತದಾನ ನಡೆಯಲಿದೆ. ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ನಿಭಾವಣೆಯ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ವಿಧಾನಸಭೆಗೆ ಒಟ್ಟು 7ಹಂತಗಳ ಮತದಾನ ನಡೆಯುತ್ತಿದೆ.

ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರರ ಕಾಲೆಳೆಯಲು ಲಭಿಸುವ ಅತಿಚಿಕ್ಕ ಅಂಶಗಳನ್ನು ಬಿಟ್ಟುಕೊಡುತ್ತಿಲ್ಲ.

ಮಾಲೆಗಾಂವ್ ಸ್ಫೋಟದಲ್ಲಿ ಹಿಂದೂಸಂಘಟನೆಗಳ ಕೈವಾಡ ಇದೆ ಅಂಶವನ್ನು ಎನ್‌ಕ್ಯಾಶ್ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ನೋಟಿಗಾಗಿ ಟಿಕೆಟ್ ನೀಡಲಾಗಿದೆ ಎಂಬ ಕಾಂಗ್ರೆಸ್ ಹಿರಿಯ ನಾಯಕಿಯಾಗಿದ್ದ ಮಾರ್ಗರೆಟ್ಆಳ್ವ ಅವರ ಸಾರ್ವಜನಿಕ ಹೇಳಿಕೆಯನ್ನು ಜಗ್ಗಾಡಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಸಿಕ್ಕ ಅವಕಾಶವನ್ನು ಬಿಜೆಪಿ ಬಿಟ್ಟುಕೊಡಲಿಲ್ಲ.

ಅತ್ತ, ಪ್ರಧಾನಿಮಂತ್ರಿಯಾಗುವ ಕನಸು ಕಾಣುತ್ತಿರುವ ಮಾಯಾವತಿಯವರ ಬಿಎಸ್ಪಿ ಪಕ್ಷವು ಸರ್ವಜ್ಞ ಹಿತಾಯ (ಎಲ್ಲಾ ಜಾತಿಗಳಿಗೂ ಸಮಾನಾವಕಾಶ) ಎಂದ ಘೋಷದೊಂದಿಗೆ ಚುನಾವಣಾ ಕಣಕ್ಕೆ ತೆರಳುತ್ತಿವೆ. ಈ ಮಧ್ಯ ಪುಡಿಪುಡಿ ಪಕ್ಷಗಳು, ಪಕ್ಷೇತರರೂ ಸಾಧ್ಯವಿರುವ ಎಲ್ಲಾ ತಂತ್ರಗಳನ್ನು ಬಳಸಿಕೊಂಡು ಯುದ್ಧರಂಗಕ್ಕಿಳಿದಿವೆ.

ಒಟ್ಟಿನಲ್ಲಿ ಡಿಸೆಂಬರ್ 8ರಂದು ಮುಂದಿನ ಲೋಕಸಭಾ ಚುನಾವಣಾ ಹಾದಿಯ ಒಂದು ಚಿತ್ರಣ ಲಭ್ಯವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಛತ್ತೀಸ್‌ಗಢ: ಅಂತಿಮ ಹಂತದ ಮತದಾನ ಆರಂಭ