ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಛತ್ತೀಸ್‌ಗಢ: ಅಜಿತ್ ಜೋಗಿ ಮೇಲೆ ಹಲ್ಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಛತ್ತೀಸ್‌ಗಢ: ಅಜಿತ್ ಜೋಗಿ ಮೇಲೆ ಹಲ್ಲೆ
ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಮೇಲೆ ಹಾಗೂ ಅವರ ಬೆಂಗಾಲು ವಾಹನದ ಮೇಲೆ ಎರಡನೆ ಹಂತದ ಚುನಾವಣಾ ಸಂದರ್ಭದಲ್ಲಿ ಹಲ್ಲೆ ನಡೆಸಲಾಗಿದೆ.

ಅಜಿತ್ ಜೋಗಿ ಸ್ಫರ್ಧಿಸುತ್ತಿರುವ ಮಾರ್ವಹಿ ಕ್ಷೇತ್ರದ ಜಿರ್ವಾರ್ ಎಂಬಲ್ಲಿ ಬಿಜೆಪಿ ಕಾರ್ಯಕರ್ತರು ಜೋಗಿ ಅವರ ಬೆಂಗಾವಲು ವಾಹನದ ಮೇಲೆ ಕಲ್ಲುತೂರಾಟ ನಡೆಸಿದ ವೇಳೆ ಜೋಗಿ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಟೆಂಪೋ ಒಂದರ ಕಿಟಿಕಿ ಗಾಜು ಪುಡಿಪುಡಿಯಾಗಿದೆ. ದಾಳಿವೇಳೆ ಜೋಗಿಯವರು ಟೆಂಪೋದಲ್ಲಿ ಇರಲಿಲ್ಲ. ಇದೇವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನೂ ಸಹ ಅನುಚಿತವಾಗಿ ನಡೆಸಿಕೊಳ್ಳಲಾಗಿದೆ ಎಂದೂ ಹೇಳಲಾಗಿದೆ.

ರಾಜ್ಯದ ಡಿಜಿಪಿ ಅವರು ಘಟನೆಯ ವಿವರಣೆ ನೀಡಲು ನಿರಾಕರಿಸಿದ್ದಾರಾದರೂ, ಅಜಿತ್ ಜೋಗಿ ಸುರಕ್ಷಿತರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಮತ್ತು ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಡಿಜಿಪಿ ತಿಳಿಸಿದ್ದಾರೆ.

ಮಹಸಮುಂದ್ ಕ್ಷೇತ್ರದಹಾಲಿ ಸಂಸದರಾಗಿರುವ ಜೋಗಿ, ಮಾರ್ವಹಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ವಿಧಾನ ಸಭೆಗೆ ಸ್ಫರ್ಧಿಸುತ್ತಿದ್ದಾರೆ. ಅವರ ಪತ್ನಿ ಹಾಲಿ ಶಾಸಕಿ ರೇಣು ಜೋಗಿ ಕೋಟಾ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದಾರೆ.

ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಕೋಟೆಯಾಗಿದ್ದು, ಜೋಗಿಯವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರದಲ್ಲಿ ಮರುಮತದಾನ ಆರಂಭ
ಮಿನಿ ಮಹಾಚುನಾವಣೆಯ ಆಖಾಡ ಸಿದ್ಧತೆ
ಛತ್ತೀಸ್‌ಗಢ: ಅಂತಿಮ ಹಂತದ ಮತದಾನ ಆರಂಭ