ಛತ್ತೀಸ್‌ಗಢದ ದ್ವಿತೀಯ ಹಾಗೂ ಅಂತಿಮ ಹಂತದ ಚುನಾವಣೆಯ 51 ಕ್ಷೇತ್ರಗಳಲ್ಲಿ ಸುಮಾರು 42 ಮಿಲಿಯಾಧಿಪತಿಗಳು ಮತ್ತು 53 ಕ್ರಿಮಿನಲ್(ಪ್ರಕರಣ ಎದುರಿಸುತ್ತಿರುವವರು)ಗಳು ಕಣದಲ್ಲಿದ್ದಾರೆ.
ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 687 ಅಭ್ಯರ್ಥಿಗಳ ಹಣೆಬರಹ ಗುರವಾರ ಮತಪೆಟ್ಟಿಗೆಯೊಳಗೆ ನಿರ್ಧಾರವಾಗುತ್ತಿದೆ.
ಚುನಾವಣಾ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿವಿವರಗಳಲ್ಲಿ 42 ಅಭ್ಯರ್ಥಿಗಳು ತಮ್ಮ ಆಸ್ತಿ ಒಂದು ಕೋಟಿ(10 ಮಿಲಿಯ)ಗಿಂತ ಅಧಿಕವಿದೆ ಎಂದು ಹೇಳಿದ್ದಾರೆ. ಈ ದೊಡ್ಡ ಕುಳಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳದ್ದು ಸಿಂಹ ಪಾಲು. ಕಾಂಗ್ರೆಸ್‌ನ 19, ಬಿಜೆಪಿಯ ಏಳು, ಬಿಎಸ್ಪಿಯ ಐದು ವ್ಯಕ್ತಿಗಳ ಆದಾಯ ಕೋಟಿಗೂ ಅಧಿಕ. ತಮ್ಮ ನಾಮಪತ್ರ ಸಲ್ಲಿಕೆ ವೇಳೆಗೆ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿದ ಆಧಾರದಲ್ಲಿ ಛತ್ತೀಸ್‌ಗಢ ಎಲೆಕ್ಷನ್ ವಾಚ್ ಈ ವರದಿ ನೀಡಿದೆ.
ಇವರೆಲ್ಲ ಇಷ್ಟೊಂದು ಆಗರ್ಭ ಶ್ರೀಮಂತರಾಗಿದ್ದರೂ, ಕೆಲವು ಅಭ್ಯರ್ಥಿಗಳು ತಮ್ಮ ಖಾಯಂ ಲೆಕ್ಕ ಸಂಖ್ಯೆ(ಪಿಎಎನ್) ನೀಡಲಿಲ್ಲ ಎಂದು ಚುನಾವಣಾ ಕಾವಲು ಸಂಸ್ಥೆ ಹೇಳಿದೆ.
29 ಅಭ್ಯರ್ಥಿಗಳು ತಮ್ಮಬಳಿ ಬ್ಯಾಂಕ್ ಠೇವಣಿ ಇಲ್ಲ ಎಂದು ಹೇಳಿದ್ದಾರೆ. ಸುಮಾರು ಎಂಟು ಮಂದಿ ಅಭ್ಯರ್ಥಿಗಳ ಆಸ್ತಿ ಒಟ್ಟಾರೆ ಒಂದು ಮಿಲಿಯ(10 ಲಕ್ಷ).
ಕ್ರಿಮಿನಲ್‌ಗಳು ಕಣದಲ್ಲಿರುವ 53 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ದಾವೆಗಳಿವೆ. ಈ ವಿಚಾರದಲ್ಲಿ ಹೆಚ್ಚೂ ಕಮ್ಮಿ ಎಲ್ಲಾ ಪಕ್ಷಗಳು ಸಮಸಮವಾಗಿವೆ. ಆದರೂ ಬಿಎಸ್ಪಿಯದ್ದು ಒಂದು ಕೈ ಮೇಲೆ ಎನ್ನಬಹುದು. ಬಿಎಸ್ಪಿಯ ಎಂಟು ಮತ್ತು ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ ಏಳು ಮಂದಿ ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಮಿಕ್ಕವರು ಇತರ ಪಕ್ಷಗಳವರು ಮತ್ತು ಸ್ವತಂತ್ರ ಅಭ್ಯರ್ಥಿಗಳು
|